ಹೊಸಪೇಟೆ: ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಹಿಂಸಾಚಾರಗಳು ನಡೆಯುತ್ತಿವೆ. ದೇಶದಲ್ಲಿರುವ ಯಾವುದೇ ಧರ್ಮದ ನಾಗರಿಕರಿಗೆ ತೊಂದರೆ ಆಗುವುದಿಲ್ಲ. ಹಾಗಾಗಿ ಎಲ್ಲ ನಾಗರಿಕರು ಸಹಕಾರ ನೀಡಬೇಕು ಎಂದು ಕೊಟ್ಟರು ಮಠದ ಸ್ವಾಮಿ ಡಾ. ಸಂಗನ ಬಸವ ಸ್ವಾಮೀಜಿ ಹೇಳಿದರು.
ಪೌರತ್ವ ಕಾಯ್ದೆ ಅನುಷ್ಠಾನಕ್ಕೆ ನಾಗರಿಕರ ಸಹಕಾರ ಮುಖ್ಯ: ಸಂಗನ ಬಸವ ಸ್ವಾಮೀಜಿ - ಕೊಟ್ಟರು ಮಠ
ದೇಶದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಹಿಂಸಾಚಾರಗಳು ನಡೆಯುತ್ತಿವೆ. ದೇಶದಲ್ಲಿರುವ ಯಾವುದೇ ಧರ್ಮದ ನಾಗರಿಕರಿಗೆ ತೊಂದರೆ ಆಗುವುದಿಲ್ಲ. ಹಾಗಾಗಿ ಎಲ್ಲ ನಾಗರಿಕರು ಸಹಕಾರ ನೀಡಬೇಕು ಎಂದು ಕೊಟ್ಟರು ಮಠದ ಸ್ವಾಮಿ ಡಾ. ಸಂಗನ ಬಸವ ಸ್ವಾಮೀಜಿ ಹೇಳಿದರು.

ಡಾ.ಸಂಗನ ಬಸವ ಸ್ವಾಮಿಜಿ
ಡಾ. ಸಂಗನ ಬಸವ ಸ್ವಾಮಿಜಿ
ಕೊಟ್ಟೂರಿನಲ್ಲಿ ನಡೆದ ಕಾರ್ತಿಕ ಮಹೋತ್ಸವ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಜನ ಸರ್ಕಾರಕ್ಕೆ ಸಹಕಾರ ನೀಡಬೇಕಿದೆ. ಭಾರತ ದೇಶದ ಜನರಿಗೆ ಈ ತಿದ್ದುಪಡಿ ಕಾಯ್ದೆಯಿಂದ ಯಾವುದೇ ರೀತಿಯ ತೊಂದರೆ ಯಾಗುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಸಂಗನ ಬಸವ ಸ್ವಾಮೀಜಿ ಅವರಿಗೆ 83ನೇ ವರ್ಷದ ಹುಟ್ಟುಹಬ್ಬದ ನಿಮಿತ್ತ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸ.ಚಿ.ರಮೇಶ ಶುಭ ಕೋರಿದರು. ನಾನೂ ಈ ಮಠದ ಭಕ್ತ. ಸ್ವಾಮೀಜಿ ಅವರು ಜನರ ಹಿತವನ್ನು ಬಯಸುವವರಾಗಿದ್ದಾರೆ ಎಂದು ಹೇಳಿದರು.