ಕರ್ನಾಟಕ

karnataka

ETV Bharat / state

ಸಾಲ ತೀರಿಸಲಾಗದೆ ವಿಷ ಸೇವಿಸಿದ ರೈತ... ಚಿಕಿತ್ಸೆ ಫಲಿಸದೇ ಸಾವು - ಬಳ್ಳಾರಿ ರೈತ ಆತ್ಮಹತ್ಯೆ

ಸಾಲ ತೀರಿಸಲಾಗದೆ ಮನನೊಂದ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೂಡ್ಲಿಗಿ ತಾಲೂಕಿನ ಚಿಕ್ಕೊಬನಹಳ್ಳಿಯಲ್ಲಿ ನಡೆದಿದೆ. ಕಾನಾಹೊಸಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

cikkobanahalli-farmer-suicide
ಸಾಲಕ್ಕೆ ತೀರಿಸಲಾಗದೆ ಮನನೊಂದ ರೈತ ಆತ್ಮಹತ್ಯೆ ಶರಣು

By

Published : Jul 9, 2020, 4:24 PM IST

ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಹೋಬಳಿಯ ಚಿಕ್ಕೊಬನಹಳ್ಳಿ ಗ್ರಾಮದ ರೈತರೊಬ್ಬರು ಬ್ಯಾಂಕಿನಲ್ಲಿ ಹಾಗೂ ಕೈಗಡ ಪಡೆದ ಸಾಲ ತೀರಿಸಲಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ರೈತನನ್ನು ಜಿ. ಚಂದ್ರಮೌಳಿ(65)ಎಂದು ಗುರುತಿಸಲಾಗಿದೆ.‌ ಜುಲೈ 1ರಂದು ವಿಷ ಸೇವಿಸಿದ್ದ ನಂತರ ಚಿತ್ರದುರ್ಗ ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿ ಬಣವಿಕಲ್ಲು ಪ್ರಗತಿಕೃಷ್ಣಾ ಬ್ಯಾಂಕಿನಲ್ಲಿ 4 ಲಕ್ಷ ರೂ. ಹಾಗೂ ಖಾಸಗಿ ಲೇವಾದೇವಿಗಾರರಿಂದ ಕೈಗಡ ಸಾಲ ಪಡೆದಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಮೃತನ ಸಹೋದರನ ಮಗ ಶ್ರೀಧರ ನೀಡಿದ ಲಿಖಿತ ದೂರಿನಂತೆ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details