ಬಳ್ಳಾರಿ :ಇಲ್ಲಿನ ರೈಲ್ವೆ ಬೋಗಿಯಲ್ಲಿ ಬಿಟ್ಟು ಹೋಗಿದ್ದ ಮಗುವಿಗೆ ಒಂದು ವರ್ಷ ತುಂಬಿದೆ. ಆ ಮಗುವಿನ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಅನಾಥ ಮಗುವಿನ ಹುಟ್ಟುಹಬ್ಬ ಆಚರಿಸಿದ ಶಿಶುಗೃಹ ಸಿಬ್ಬಂದಿ
ಇಂದು ಆ ಮಗುವಿಗೆ ಒಂದು ವರ್ಷ ತುಂಬಿದೆ. ನಿಶ್ಚಿತಾಳ ಹುಟ್ಟು ಹಬ್ಬವನ್ನು ಶಿಶುಗೃಹದ ಸಿಬ್ಬಂದಿಯೆಲ್ಲ ಸೇರಿ ಸಂತಸ ಮತ್ತು ಸಂಭ್ರಮದಿಂದ ಆಚರಿಸಿದರು..
Baby birthday
ಕಳೆದೊಂದು ವರ್ಷದ ಹಿಂದೆ ಬಳ್ಳಾರಿ ರೈಲ್ವೆ ನಿಲ್ದಾಣದ ಬೋಗಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿತ್ತು. ಅದನ್ನು ಅಧಿಕಾರಿಗಳು ರಕ್ಷಿಸಿ ಸರ್ಕಾರಿ ಶಿಶು ಗೃಹಕ್ಕೆ ತಂದು ಸಾಕುತ್ತಿದ್ದು, ನಿಶ್ವಿತಾ ಎಂದು ಆ ಮಗುವಿಗೆ ಈಗಾಗಲೇ ನಾಮಕರಣವನ್ನೂ ಮಾಡಲಾಗಿದೆ.
ಇಂದು ಆ ಮಗುವಿಗೆ ಒಂದು ವರ್ಷ ತುಂಬಿದೆ. ನಿಶ್ಚಿತಾಳ ಹುಟ್ಟು ಹಬ್ಬವನ್ನು ಶಿಶುಗೃಹದ ಸಿಬ್ಬಂದಿಯೆಲ್ಲ ಸೇರಿ ಸಂತಸ ಮತ್ತು ಸಂಭ್ರಮದಿಂದ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದಪಾಶಾ ಸೇರಿ ಸಂಸ್ಥೆಯ ಅಧೀಕ್ಷಕರು ಹಾಗೂ ಸಿಬ್ಬಂದಿ ಇದ್ದರು.