ಬಳ್ಳಾರಿ: 2019-20ನೇ ಸಾಲಿನಲ್ಲಿ ನೆಹರು ಕೆಂದ್ರದಲ್ಲಿ ನೋಂದಣಿಯಾಗಿ ಕೇಂದ್ರದ ಎಲ್ಲ ಕಾರ್ಯಕ್ರಮಗಳನ್ನು ಉತ್ತಮವಾಗಿ ನಿರ್ವಹಿಸಿದ್ದಕ್ಕೆ ಚಿಗುರು ಕಲಾ ತಂಡವು ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ಅವರಿಂದ ಸೋಮವಾರ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಪತ್ರವನ್ನು ಪಡೆಯಿತು.
ಬಳ್ಳಾರಿಯ ಚಿಗುರು ಕಲಾ ತಂಡಕ್ಕೆ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ - Bellary latest News
ಬಳ್ಳಾರಿಯ ಚಿಗುರು ಕಲಾ ತಂಡವು ಕೇಂದ್ರದ ಎಲ್ಲ ಕಾರ್ಯಕ್ರಮಗಳನ್ನು ಉತ್ತಮವಾಗಿ ನಿರ್ವಹಿಸಿದ್ದಕ್ಕೆ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಪತ್ರ ಪಡೆಯಿತು.
ಚಿಗುರು ಕಲಾತಂಡ
ನೆಹರು ಕೇಂದ್ರದ ಎಲ್ಲ ಜನಪರ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡುವಂತಹ ಯುವ ಸಂಘಗಳಿಗೆ ಜಿಲ್ಲಾ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ ಪ್ರಥಮವಾಗಿ ಚಿಗುರು ಕಲಾ ತಂಡ ಇಬ್ರಾಹಿಂಪುರ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಪತ್ರ ಮತ್ತು ವಿಜಯ ಮಹಿಳಾ ಸಂಘ ರೇಡಿಯೋ ಪಾರ್ಕ್ ಉತ್ತಮ ಪ್ರಶಸ್ತಿ ಪತ್ರ ಪಡೆದುಕೊಂಡಿದೆ.
ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ಅವರು ಜಿಲ್ಲಾ ಪ್ರಶಸ್ತಿ ಪತ್ರವನ್ನು ಎರಡು ಯುವ ಸಂಘಗಳಿಗೆ ನೀಡಿ ಗೌರವಿಸಿದರು.