ಬಳ್ಳಾರಿ: ಕೊರೊನಾ ವೈರಸ್ ಭೀತಿಯಿಂದಾಗಿ ಗಣಿನಾಡಿನ ಕೋಳಿ ಫಾರಂ ಮಾಲೀಕರು ಆಟೋದಲ್ಲಿ ಕೋಳಿಗಳನ್ನು ಹೊತ್ತೊಯ್ದು ಮಾರಾಟ ಮಾಡುವಂಥ ಪರಿಸ್ಥಿತಿ ಎದುರಾಗಿದೆ. ಬಳ್ಳಾರಿ ತಾಲೂಕಿನ ಕೋಳೂರು ಕ್ರಾಸ್ ಹಾಗೂ ಸಿರುಗುಪ್ಪ ತಾಲೂಕಿನ ಸಿರಿಗೇರಿ ಕ್ರಾಸ್ ಬಳಿ ಸರಕು ಸಾಗಣೆ ಮಾಡುವವರು ಆಟೋದಲ್ಲಿ ಕೋಳಿಗಳನ್ನು ತಂದು ಮಾರಾಟ ಮಾಡುತ್ತಿದ್ದರು.
ಬಳ್ಳಾರಿಯಲ್ಲಿ ಕುಕ್ಕುಟೋದ್ಯಮಕ್ಕೂ ತಟ್ಟಿದ ಕೊರೊನಾ ಬಿಸಿ; ಅಗ್ಗದ ದರದಲ್ಲಿ ಸಿಗುತ್ತೆ ಅಂದ್ರೂ ಖರೀದಿಗೆ ನಿರಾಸಕ್ತಿ - ಬಳ್ಳಾರಿಯಲ್ಲಿ ಕೊರೊನಾ ಭೀತಿ
ಕೊರೊನಾ ವೈರಸ್ ಭೀತಿಯಿಂದ ಜನರು ಕೋಳಿ ಮಾಂಸ ತಿನ್ನೋದನ್ನು ಬಿಡುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಕೋಳಿ ಬೆಲೆ ದಿಢೀರನೆ ಕುಸಿದಿದೆ. ಕಡಿಮೆ ಬೆಲೆಗೆ ಕೋಳಿ ಕೊಡ್ತೀವಿ, ತಗೊಳ್ಳಿ ಅಂದ್ರೂ ಚಿಕನ್ ಪ್ರಿಯರು ಖರೀದಿ ಮನಸ್ಸು ಮಾಡುತ್ತಿರಲಿಲ್ಲ. ಅಲ್ಲೊಬ್ಬ ಇಲ್ಲೊಬ್ಬ ಕಡಿಮೆ ಬೆಲೆಗೆ ಕೋಳಿ ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ಕಾಣುತ್ತಿತ್ತು.
ಒಂದಕ್ಕೊಂದು ಕೋಳಿಯನ್ನು ಉಚಿತವಾಗಿ ಕೊಟ್ಟರೂ ಗ್ರಾಮೀಣ ಭಾಗದ ಚಿಕನ್ ಪ್ರಿಯರು 'ಒಲ್ಲೆ..ಒಲ್ಲೆ..'ಎನ್ನುತ್ತಿದ್ದರು. ನೂರು ರೂಪಾಯಿಗೆ ಒಂದು ಕೋಳಿ ಎಂಬ ಘೋಷಣೆ ಕೂಗುತ್ತಿದ್ದರೂ ಯಾರೂ ಕೂಡ ಸರಕು ಸಾಗಣೆ ವಾಹನದ ಸುಳಿಯಲಿಲ್ಲ. ಬಳಿಕ ನೂರು ರೂಪಾಯಿಗೆ ಎರಡು ಕೋಳಿ ಎಂಬ ಘೋಷಣೆ ಕೂಗಿದ್ರೂ ಅಷ್ಟೇ, ಜನರು ಕೋಳಿಗಳನ್ನು ತೆಗೆದುಕೊಳ್ಳಲು ಮುಂದೆ ಬರ್ತಿರಲಿಲ್ಲ!
ಅಷ್ಟೇ ಏಕೆ? ಒಂದಕ್ಕೊಂದು ಉಚಿತ ಎಂಬಂತೆ ಜೋರಾಗಿ ಕೂಗಿದ್ರೂ ಕೂಡ ಅಲ್ಲೊಬ್ಬ, ಇಲ್ಲೊಬ್ಬ ಚಿಕನ್ ಪ್ರಿಯರು ಕೋಳಿಗಳನ್ನು ಖರೀದಿಸೋಕೆ ಮನಸ್ಸು ಮಾಡುತ್ತಿದ್ದರು. ಕೇವಲ ನೂರು ಕೋಳಿಗಳನ್ನು ಮಾರಾಟಕ್ಕೆ ತರಲಾಗಿತ್ತಾದ್ರೂ, ಆ ಪೈಕಿ 50 ಕೋಳಿಗಳನ್ನು ಮಾತ್ರ ಮಾರಾಟ ಮಾಡಲಾಗಿದೆ.
TAGGED:
ಬಳ್ಳಾರಿಯಲ್ಲಿ ಕೊರೊನಾ ಭೀತಿ