ಚಿಕ್ಕೋಡಿ: ದಿನದಿಂದ ದಿನಕ್ಕೆ ರೈತರು ರಾಸಾಯನಿಕ ಗೊಬ್ಬರಗಳ ಮೊರೆ ಹೋಗುತ್ತಿದ್ದು, ಇದರಿಂದ ಜಮೀನುಗಳು ಹಾಳಾಗುತ್ತಿವೆ. ಇದನ್ನ ತಡೆಯಲು ರೈತರಿಗೆ ಗೋಕೃಪಾಮೃತ ರಾಸಾಯನಿಕ ಉಪಯೋಗಿಸಲು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮೀಜಿ ಸಲಹೆ ನೀಡಿದರು.
ಗೋಕೃಪಾಮೃತ ರಾಸಾಯನಿಕ ಉಪಯೋಗಿಸುವಂತೆ ರೈತರಿಗೆ ಚಂದ್ರಶೇಖರ ಮಹಾಸ್ವಾಮೀಜಿ ಸಲಹೆ - Hukkeri Hiremath
ಗೋಕೃಪಾಮೃತ ರಾಸಾಯನಿಕ ಉಪಯೋಗಿಸಲು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮೀಜಿ ರೈತರಿಗೆ ಸಲಹೆ ನೀಡಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮಠದಲ್ಲಿ ವಿವಿಧ ಭಾಗದ ರೈತರಿಗೆ ಗೋಕೃಪಾಮೃತ ಬಗ್ಗೆ ಪ್ರಾಯೋಗಿಕ ಪರೀಕ್ಷೆ ಮಾಡಿ ಹೇಗೆ ಈ ಔಷಧವನ್ನು ಬಳಕೆ ಮಾಡಬೇಕೆಂದು ಸಲಹೆ ನೀಡಿದರು. ರೈತರು ಬೆಳೆಗಳಿಗೆ ಹಲವಾರು ರೀತಿಯ ರಾಸಾಯನಿಕ ಗೊಬ್ಬರ ಉಪಯೋಗಿಸಿ ವಿಷಯುಕ್ತ ಆಹಾರ ಬೆಳೆಯುವುದನ್ನು ಮನಗಂಡ ಕೊಲ್ಲಾಪುರ ಕನ್ನೆರಿ ಮಠದ ಅದೃಶ್ಯ ಮಹಾರಾಜರು ಮತ್ತು ಗುಜರಾತ್ನ ಗೋಪಾಲ ಭೈ ಸುತಾರಿಯಾ ಅವರು ಗೋವಿನಿಂದ ತಯಾರಿಸಿದ ರಾಸಾಯನಿಕ ಗೋಕೃಪಾಮೃತವನ್ನು ಬಿಡುಗಡೆ ಮಾಡಿ ರಾಜ್ಯಾದ್ಯಾಂತ ರೈತರಿಗೆ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಈ ಔಷಧ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.