ಕರ್ನಾಟಕ

karnataka

ETV Bharat / state

ದರ್ಶನ್​​​​​ಗೆ ಶ್ರೀಕೃಷ್ಣದೇವರಾಯ ಪಾತ್ರದಲ್ಲಿ ನಟಿಸುವ ಆಸೆಯಂತೆ - ಶಾಸಕ ಮುನಿರತ್ನ

ಇತಿಹಾಸ ಪ್ರಸಿದ್ಧ ಹಂಪಿ ಉತ್ಸವದಲ್ಲಿ ಭಾಗವಹಿಸಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾನು ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ನಟಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಶಾಸಕ, ನಿರ್ಮಾಪಕ ಮುನಿರತ್ನ ಕೂಡಾ ಸಿನಿಮಾವನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಹೇಳಿದ್ದಾರೆ.

ದರ್ಶನ್​​

By

Published : Mar 3, 2019, 5:53 PM IST

ಕಲಾವಿದನಿಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆಯಿರುತ್ತದೆ. ಸದ್ಯಕ್ಕೆ ಯಜಮಾನ ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ದರ್ಶನ್​​​​​ಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಬೇಕೆಂಬ ಆಸೆಯಂತೆ.

ನಟ ದರ್ಶನ್​​

ಬಳ್ಳಾರಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಂಪಿ ಉತ್ಸವದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲು. ಉತ್ಸವದಲ್ಲಿ ಭಾಗವಹಿಸುತ್ತಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದರು.

ಅಭಿಮಾನಿ ದೇವರ ಪ್ರೀತಿ, ವಿಶ್ವಾಸಕ್ಕೆ ನಾನೆಂದಿಗೂ ಚಿರಋಣಿ. ಶಾಸಕ, ನಿರ್ಮಾಪಕ ಮುನಿರತ್ನ ಅವರು ಶ್ರೀಕೃಷ್ಣದೇವರಾಯ ಸಿನಿಮಾ ಚಿತ್ರೀಕರಣ ಆರಂಭಿಸಿದರೆ ಕೃಷ್ಣದೇವರಾಯನ ಪಾತ್ರದಲ್ಲಿ ನಟಿಸುವುದಾಗಿ ಹೇಳಿದರು.

ಇದೇ ವೇಳೆ ಮಾತನಾಡಿದ ನಿರ್ಮಾಪಕ, ಶಾಸಕ ಮುನಿರತ್ನ ವಿಜಯನಗರ ಅರಸ ಶ್ರೀ ಕೃಷ್ಣ ದೇವರಾಯ ನಾಲ್ಕು ಭಾಷಿಕರ ಪ್ರೀತಿಪೂರ್ವಕ ಅರಸರಾಗಿದ್ದರು. ಅವರ ಕುರಿತು ಸಿನಿಮಾ ಮಾಡುವೆ. ಆ ಪಾತ್ರವನ್ನು ದರ್ಶನ್ ಅವರೇ ನಿಭಾಯಿಸಲಿದ್ದಾರೆ ಎಂದು ಹೇಳಿದರು.

ABOUT THE AUTHOR

...view details