ಹೊಸಪೇಟೆ:ಗಣೇಶ ಹಬ್ಬವನ್ನು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪನೊಂದಿಗೆ ಆಚರಿಸಿ. ಆ ಮೂಲಕ, ಮಾಲಿನ್ಯ ರಹಿತ ವಾತಾವರಣಕ್ಕೆ ಕೈ ಜೋಡಿಸಿ ಎಂದು ಅರಣ್ಯ ಸಚಿವ ಆನಂದ ಸಿಂಗ್ ಮನವಿ ಮಾಡಿಕೊಂಡಿದ್ದಾರೆ.
ಪರಿಸರ ಸ್ನೇಹಿ ಗಣೇಶನೊಂದಿಗೆ ಚತುರ್ಥಿ ಆಚರಿಸಿ: ಸಚಿವ ಆನಂದ ಸಿಂಗ್ ಮನವಿ - Minister Anand Singh
ಮಣ್ಣು ಹಾಗೂ ರೋಗ ನಿರೋಧಕ ಶಕ್ತಿಯಿರುವ ಅರಿಶಿಣದಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಯೊಂದಿಗೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕೋವಿಡ್-19 ಸಂದರ್ಭದಲ್ಲಿನ ಗಣೇಶ ಹಬ್ಬದ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು, ಅರಿಶಿಣ ಗಣಪ ಪರಿಸರಸ್ನೇಹಿ ಗಣಪತಿಯ ಹೊಸ ವಿಧದ ಪರಿಕಲ್ಪನೆಯಾಗಿದೆ. ಏಕೆಂದರೆ ಅರಿಶಿಣದಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಔಷಧ ಗುಣಗಳಿವೆ. ಹೀಗಾಗಿಯೇ ಅರಿಶಿಣ, ಪೂಜೆ ಹಾಗೂ ಅಡುಗೆ ಮನೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಹೀಗಾಗಿ ಈ ಬಾರಿ ಮಣ್ಣಿನೊಂದಿಗೆ ಅರಿಶಿಣದಿಂದಲೂ ಗಣೇಶನ ಮೂರ್ತಿ ತಯಾರಿಸಿ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಬೇಕು.
ವಿನಾಯಕ ನಿಮಜ್ಜನದ ವೇಳೆಯೂ ಹೊರಗೆಲ್ಲೂ ಮಾಡದೇ ಮನೆಯಲ್ಲೇ ನಿಮಜ್ಜನ ಮಾಡಬೇಕು. ಆ ಮೂಲಕ ಆರೋಗ್ಯಪೂರ್ಣ ವಾತಾವರಣಕ್ಕೆ ಜನರು ಕೈ ಜೋಡಿಸಬೇಕು ಎಂದು ಈ ವೇಳೆ ಮನವಿ ಮಾಡಿಕೊಂಡಿದ್ದಾರೆ.