ಬಳ್ಳಾರಿ:ಬೀದರ್, ಬಳ್ಳಾರಿ-ಶ್ರೀರಂಗಪಟ್ಟಣದ ರಾಷ್ಟ್ರೀಯ ಹೆದ್ದಾರಿ ನಂ.150 (ಎ)ರಲ್ಲಿ ಸಂಚರಿಸುತ್ತಿದ್ದ ಲಾರಿ ಚಾಲಕರ ಮೇಲಿನ ಹಲ್ಲೆ-ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅಂತಾರಾಜ್ಯ ಖದೀಮರನ್ನು ತೆಕ್ಕಲಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿ ಚಾಲಕರ ಮೇಲೆ ಹಲ್ಲೆ-ದರೋಡೆ ಪ್ರಕರಣ: ಮೂವರ ಬಂಧನ - Bellary Thekkalakote Police Station
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಲಾರಿ ಚಾಲಕರ ಮೇಲಿನ ಹಲ್ಲೆ-ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಉಸ್ಮನಾಬಾದ್ ಜಿಲ್ಲೆಯ ಸುಭಾಷ್ ಕಾಳೆ (29), ನಾನಾ ಕಾಳೆ (40), ಸುಭಾಷ್ ಕಾಳೆ (25) ಬಂಧಿತರು. ಎರಡು ಲಾರಿಗಳನ್ನು ಜಪ್ತಿಗೊಳಿಸಲಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ ಎಂದಿದ್ದಾರೆ.
ಸರಕು ಸಾಗಣೆ ಲಾರಿಗಳಲ್ಲಿ ಚಾಲಕ ಮತ್ತು ಕ್ಲೀನರ್ಗಳಾಗಿ ಬಂದು ಹೆದ್ದಾರಿಯ ಮೇಲೆ ಸುಲಿಗೆ, ದರೋಡೆ, ಟೈಯರ್ಗಳ ಕಳ್ಳತನ, ಡೀಸೆಲ್ ಕಳ್ಳತನ, ಮನೆಗಳ್ಳತನ ಹಾಗೂ ರಸ್ತೆಯುದ್ದಕ್ಕೂ ರಸ್ತೆಯ ಆಜು-ಬಾಜುಗಳಲ್ಲಿರುವ ಅಂಗಡಿಗಳ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ.