ಬಳ್ಳಾರಿ :ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರಿನ ಆಧಾರದ ಮೇರೆಗೆ ಸಂಡೂರು ತಹಶೀಲ್ದಾರ್ ಹೆಚ್.ಜೆ.ರಶ್ಮಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ನಕಲಿ ವೈದ್ಯ ಜಾಫರ್ ವಲಿಯನ್ನ ಎಂಬಾತನನ್ನ ಬಂಧಿಸಿ ಕರೆದೊಯ್ಯಲು ಯತ್ನಿಸಿದ ವೇಳೆ ಅಡ್ಡಿಪಡಿಸಿದ ಗ್ರಾಮದ 23 ಮಂದಿ ಮೇಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿಸಲಾಗಿದ್ದ ನಕಲಿ ವೈದ್ಯ ಜಾಫರ್ ವಲಿ ತಪ್ಪಿಸಿಕೊಂಡು ಓಡಿ ಹೋಗಲು ಗ್ರಾಮದ 23 ಮಂದಿ ಅನುವು ಮಾಡಿಕೊಟ್ಟಿದ್ದಾರೆ.
ಈ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಉಮೇಶ ಮುರಾರಿಪುರ ನರಸಪ್ಪ, ಹೊನ್ನೂರಸ್ವಾಮಿ ಜರ್ಮಲಿ ಪರಸಪ್ಪ, ಮಂಜು ಗೋನಾಳ ಈರಪ್ಪ, ಅಂಜಿನಪ್ಪ ಬಂಡ್ರಿ ಓಬಯ್ಯ, ತಿಪ್ಪೆಸ್ವಾಮಿ, ನೂರ್ ಬಾಷಾಸಾಬ್, ಪರಸಪ್ಪ ನಾಗಪ್ಪ, ಭರಮಪ್ಪ ಜರ್ಮಲಿ ಮಾರೆಪ್ಪ, ಅಂಜಿನಪ್ಪ, ಜಿ.ಗೋವಿಂದಪ್ಪ, ಶಿವಣ್ಣ, ಮಂಜು ಅಗಸರ ದುರಗಪ್ಪ, ರಮೇಶ ಬಂಡ್ರಿ ಕುಮಾರಪ್ಪ, ಕುಮಾರಪ್ಪ ಸಣ್ಣಚನ್ನಪ್ಪ, ಬಂಡ್ರಿ ಮಾರೇಶ, ಸುರೇಶ ಗೋನಾಳ ರಾಜಪ್ಪ, ಬಂಡ್ರಿ ಕೊಟ್ರೇಶ, ಅರ್ಜುನ ಭರಮಪ್ಪ, ಮಾರೇಶ, ಓಬಮ್ಮ ಮುರಾರಿಪುರ ಮುದ್ದಯ್ಯ, ಪಾಪಮ್ಮ ಬಂಡ್ರಿ ಕುಮಾರಪ್ಪ, ಹನುಮಕ್ಕ ಗೋನಾಳ ಈರಪ್ಪ,ಕುಮಾರಪ್ಪ ಸಣ್ಣ ಚನ್ನಪ್ಪ ಅವರ ಮೇಲೆ 353, 341, 143, 147, 420, 269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದ್ದಾರೆ.