ಕರ್ನಾಟಕ

karnataka

ETV Bharat / state

ರೈತನ ಹಲ್ಲೆ.. ಅಮಾನತುಗೊಂಡ ಪಿಎಸ್‍ಐ ಮಣಿಕಂಠ ವಿರುದ್ಧ ಪ್ರಕರಣ ದಾಖಲು - ಬಳ್ಳಾರಿ ಎಸ್​ಪಿ ಸೈದುಲು ಅಡಾವತ್

ಪಿಎಸ್‍ಐ ಮಣಿಕಂಠ ಅವರ ವಿರುದ್ಧ ರೈತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ. ಆದರೆ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಬಳ್ಳಾರಿ ಎಸ್​ಪಿ ಸೈದುಲು ಅಡಾವತ್ ತಿಳಿಸಿದರು.

suspended PSI Manikantha
ಅಮಾನತುಗೊಂಡ ಪಿಎಸ್‍ಐ ಮಣಿಕಂಠ

By

Published : Aug 24, 2022, 12:51 PM IST

ಬಳ್ಳಾರಿ:ಜಿಲ್ಲೆಯ ಕುರುಗೋಡು ಠಾಣಾ ವ್ಯಾಪ್ತಿಯ ಕೋಳೂರಿನಲ್ಲಿ ನಡೆದಿದ್ದ ಒಂದು ಘಟನೆಗೆ ಸಂಬಂಧಿಸಿದಂತೆ ಆಗಸ್ಟ್ 11ರಂದು ಪಿಎಸ್‍ಐ ಆಗಿದ್ದ ಮಣಿಕಂಠ ಅವರ ವಿರುದ್ಧ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬಳ್ಳಾರಿ ಎಸ್​ಪಿ ಸೈದುಲು ಅಡಾವತ್ ಮಾಹಿತಿ ನೀಡಿದರು.

ಪ್ರಕರಣದ ಕುರಿತು ನಿನ್ನೆ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಿಎಸ್‍ಐ ಮಣಿಕಂಠ ಅವರ ವಿರುದ್ಧ ರೈತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಮತ್ತು ಹಲ್ಲೆ ಪ್ರಕರಣ ದಾಖಲಾಗಿದೆ. ಆದರೆ ಅವರನ್ನು ಈವರೆಗೆ ಬಂಧಿಸಿಲ್ಲ. ಅವರ ವಿರುದ್ಧ ದಾಖಲಾದ ದೂರು ಮತ್ತಿತರ ವಿಷಯಗಳು ಸೇರಿದಂತೆ ಕುರುಗೋಡು ಸಿಪಿಐ ಅವರಿಂದ ಈಗಾಗಲೇ ವರದಿ ತರಿಸಿಕೊಂಡು ಮಣಿಕಂಠ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

ಬಳ್ಳಾರಿ ಎಸ್​ಪಿ ಸೈದುಲು ಅಡಾವತ್ ಪ್ರತಿಕ್ರಿಯೆ

ಅಲ್ಲದೇ ಅವರ ವಿರುದ್ಧ ದಾಖಲಾಗಿರುವ ಜಾತಿನಿಂದನೆ ಮತ್ತು ಹಲ್ಲೆ ಪ್ರಕರಣವನ್ನು ತನಿಖೆ ಮಾಡಿ ವರದಿ ನೀಡುವಂತೆ ಬಳ್ಳಾರಿ ನಗರ ಡಿವೈಎಸ್‍ಪಿ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಮಣಿಕಂಠ ಅವರನ್ನು ಇನ್ನೂ ಬಂಧಿಸಲಾಗಿಲ್ಲ. ಅವರು ನಾಪತ್ತೆಯಾಗಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಬಳ್ಳಾರಿಯಲ್ಲಿ ಶಾಲಾಕಟ್ಟಡ ಕುಸಿತ : ತಪ್ಪಿದ ಭಾರಿ ದುರಂತ

ABOUT THE AUTHOR

...view details