ಕರ್ನಾಟಕ

karnataka

ETV Bharat / state

ಕಾರು ಕಾಲುವೆಗೆ ಉರುಳಿ ಮಂಗಳಮುಖಿ ಸಾವು... ಜೊತೆಗಿದ್ದ ಖಾಸಗಿ ಕಂಪನಿ ಉದ್ಯೋಗಿ ಪಾರು - trance gender died from ballary

ಹೊಸಪೇಟೆ ನಗರ ಸಮೀಪದ ಹೆಚ್​ಲ್​ಸಿ ಕಾಲುವೆಗೆ ಕಾರೊಂದು ಉರುಳಿದ ಪರಿಣಾಮ ಮಂಗಳಮುಖಿಯೋರ್ವರು ಮೃತಪಟ್ಟಿದ್ದಾರೆ. ಜೊತೆಗಿದ್ದ ಉದ್ಯೋಗಿ ಮುಖೇಶ್, ಕಾಲುವೆಗೆ ಬಿದ್ದ ಕೂಡಲೇ ಕಾರಿನ ಗ್ಲಾಸ್ ಒಡೆದು ಹೊರಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Car accident in Ballary : Trance gender died!
ಕಾಲುವೆಗೆ ಉರುಳಿದ ಕಾರು: ಮಂಗಳಮುಖಿ ಸಾವು!

By

Published : Feb 23, 2020, 8:18 PM IST

ಬಳ್ಳಾರಿ:ಜಿಲ್ಲೆಯ ಹೊಸಪೇಟೆ ನಗರ ಸಮೀಪದ ಹೆಚ್​ಎಲ್​ಸಿ ಕಾಲುವೆಗೆ ಕಾರೊಂದು ಉರುಳಿಬಿದ್ದ ಪರಿಣಾಮ ಮಂಗಳಮುಖಿವೋರ್ವರು ಸಾವನ್ನಪ್ಪಿದ್ದಾರೆ.

ಕಾಲುವೆಗೆ ಉರುಳಿದ ಕಾರು: ಮಂಗಳಮುಖಿ ಸಾವು, ಖಾಸಗಿ ಕಂಪನಿ ಉದ್ಯೋಗಿ ಪಾರು

ಮೃತರನ್ನು ಮಂಗಳಮುಖಿ ಅನಿತಾ (35) ಎಂದು ಗುರುತಿಸಲಾಗಿದೆ. ಅನಿತಾ ಅವರಿಗೆ ತಾಯಿ, ಇಬ್ಬರು ಸಹೋದರರು, ಒಬ್ಬ ಸಹೋದರಿ‌ ಇದ್ದಾರೆ. ಖಾಸಗಿ ಕಂಪನಿಯ ಉದ್ಯೋಗಿ ಜತೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಮುಖ್ಯ ರಸ್ತೆ ಬಿಟ್ಟು ಕಾಲುವೆ ಪಕ್ಕದ ರಸ್ತೆಯಲ್ಲಿ ಕಾರು ಕಾಲುವೆಗೆ ಉರುಳಿದೆ. ಕಾಲುವೆಗೆ ಬಿದ್ದ ಕೂಡಲೇ ನೀರಿನಲ್ಲಿ ಮುಳುಗಿದ್ದ ಉದ್ಯೋಗಿ ಮುಖೇಶ್, ಕಾರಿನ ಗ್ಲಾಸ್ ಒಡೆದು ಹೊರಬಂದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರನ್ನು ಕಾಲುವೆಯಿಂದ ಮೇಲೆತ್ತಲಾಗಿದೆ.‌ ಸದ್ಯ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details