ಕರ್ನಾಟಕ

karnataka

ETV Bharat / state

ವಿಜಯನಗರ: ಮರಳಿಗೂಡಿಗೆ ಹಾರಿದ ಸೆರೆ ಸಿಕ್ಕ ಯೂರೋಪಿನ್ ಗ್ರಿಫನ್ ರಣಹದ್ದು - ETv Bharat Kannada news

ಕಳೆದ ತಿಂಗಳು ಸೆರೆ ಸಿಕ್ಕಿದ್ದಅಪರೂಪದ ರಣಹದ್ದು ಮರಳಿಗೂಡಿಗೆ ಹಾರಿದೆ - ಪಕ್ಷಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ ಪಶುವೈದ್ಯೆ ಡಾ.ವಾಣಿ - ರಣಹದ್ದಿನ ಕಾಲಿಗೆ ವಿಶೇಷ ಗುರುತಿನ ನೀಲಿ ಬಣ್ಣ ಉಂಗುರ

European griffon vulture
ಯೂರೋಪಿನ್ ಗ್ರಿಫನ್ ರಣಹದ್ದು

By

Published : Jan 13, 2023, 10:44 PM IST

Updated : Jan 14, 2023, 2:39 PM IST

ವಿಜಯನಗರ:ಕಳೆದ ತಿಂಗಳಷ್ಟೇ ನಗರದ ರಾಣಿಪೇಟೆಯ ಶಾಲಾ ಮಕ್ಕಳ ಕೈಗೆ ಸಿಕ್ಕಿದ್ದ ಅಪರೂಪದ ಯೂರೋಪಿನ್ ಗ್ರಿಫನ್ ರಣಹದ್ದು ಮರಳಿಗೂಡಿಗೆ ಹಾರಿದೆ. ಕಳೆದ ತಿಂಗಳು ಡಿಸೆಂಬರ್​ನಲ್ಲಿ ನಗರದ ರಾಣಿಪೇಟೆಯಲ್ಲಿ ಅಸ್ವಸ್ಥ ಸ್ಥಿತಿಯಲ್ಲಿದ್ದ ಯೂರೋಪಿಯನ್ ಗ್ರಿಫನ್ ಜಾತಿಯ ರಣಹದ್ದು ಶಾಲಾ ಮಕ್ಕಳ ಕಣ್ಣಿಗೆ ಕಾಣಸಿಕೊಂಡಿತ್ತು. ಈ ರಣಹದ್ದುನ್ನು ಪತ್ರಕರ್ತ ಹಾಗೂ ಹವ್ಯಾಸ ಛಾಯಾಗ್ರಾಹಕನಾಗಿರುವ ಶಿವಶಂಕರ ಬಣಗಾರ್ ಅವರು ಮಕ್ಕಳ ಕೈಯಿಂದ ರಕ್ಷಿಸಿದ್ದರು.

ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕಿಗೆ ಈ ರಣಹದ್ದನ್ನು ಹಸ್ತಾಂತರ ಮಾಡಿದ್ದರು. ಮೃಗಾಲಯದ ತಜ್ಞ ಪಶುವೈದ್ಯೆ ಡಾ.ವಾಣಿ ಅವರು, ಅಸ್ವಸ್ಥ ಸ್ಥಿತಿಯಲ್ಲಿದ್ದ ಪಕ್ಷಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಿದ್ದರು. ಈಗ ಚೇತರಿಸಿಕೊಂಡ ಪಕ್ಷಿಯನ್ನು ತಾಲೂಕಿನ ಇಂಗಳಿಗಿ ಗ್ರಾಮದ ಬೆಟ್ಟದ ತುದಿಯಲ್ಲಿ ಪಂಜರದಿಂದ ಹೊರಗೆ ಹಾರಿ ಬಿಟ್ಟು ಪಕ್ಷಿ ಪ್ರೇಮಿಗಳು ಮುಕ್ತಗೊಳಿಸಿದರು.

ಯೂರೋಪಿನ್ ಗ್ರಿಫನ್ ರಣಹದ್ದು

ರಣಹದ್ದು ಗುರುತು ಪತ್ತೆ: ವನ್ಯಜೀವಿ ಸಂಶೋದಕ ಡಾ.ಸಮದ್ ಕೊಟ್ಟೂರು ಅವರು ರಾಷ್ಟೀಯ ರಣಹದ್ದು ತಜ್ಞರನ್ನು ಸಂಪರ್ಕಿಸಿ ಅಪರೂಪವಾಗಿ ಕಂಡು ಬಂದ ರಣಹದ್ಧಿನ ನೈಜಗುರುತನ್ನು ಪತ್ತೆ ಮಾಡಿದರು. ಬೃಹತ್ ಗಾತ್ರದ ಪಕ್ಷಿಯ ಎತ್ತರ, ಗಾತ್ರ, ತೂಕ, ಗರಿಗಳ ಬಣ್ಣ, ಮುಂತಾದ ಗುಣ ಬಣ್ಣವನ್ನು ಪರೀಕ್ಷಿಸಿ ಇದೊಂದು ವರ್ಷ ವಯೋಮಾನದ ಯೂರೋಪಿಯನ್ ಗ್ರಿಫನ್ ಎಂಬ ರಣಹದ್ಧು ಎಂಬುದನ್ನು ಖಚಿತ ಪಡಿಸಿದರು.

ಸಾಮಾನ್ಯವಾಗಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಕಂಡು ಬರುವ ಈ ರಣಹದ್ಧುಗಳು ದಕ್ಷಿಣ ಭಾರತಕ್ಕೆ ವಲಸೆ ಬಂದಾಗ ಕೆಲವೊಮ್ಮೆ ನಿರ್ಜಲೀಕರಣದಿಂದ ಬಸವಳಿದು ನೆಲಕ್ಕೆ ಬೀಳುವುದನ್ನು ಕಾಣುತ್ತವೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಹೆಚ್ಚಾಗಿ ರಣಹದ್ಧಗಳು ಬಸವಳಿದು ನೆಲಕ್ಕೆ ಬಿದ್ದಿರುವ ಪ್ರಸಂಗಗಳು ಕಂಡು ಬಂದಿವೆ. ಇತಂಹ ಸಂದರ್ಭದಲ್ಲಿ ಅವುಗಳನ್ನು ಸಂರಕ್ಷಿಸಿ ಜೊತೆಗೆ ಚಿಕಿತ್ಸೆ ನೀಡಿ ಅವು ಚೇತರಿಸಿಕೊಂಡ ಬಳಿಕ ಮರಳಿ ಮತ್ತೆ ಹಾರಿಬಿಡಲಾಗುತ್ತದೆ.

ಯೂರೋಪಿನ್ ಗ್ರಿಫನ್ ರಣಹದ್ದು

ಅದೇ ರೀತಿ ಇದೀಗ ಈ ರಣಹದ್ಧನ್ನು ಕೂಡ ಸಮೀಪದ ಇಂಗಳಗಿ ಗ್ರಾಮದ ಬಳಿಯ ಎತ್ತರದ ಬೆಟ್ಟದ ತುದಿಯಲ್ಲಿ ಪಂಜರದಿಂದ ಹೊರಬಿಟ್ಟು ಸುತ್ತಮುತ್ತಲಿನ ಪರಿಸರವನ್ನು ಅವಲೋಕಿಸಲು ಅವಕಾಶ ನೀಡಲಾಯಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಬೆಟ್ಟದ ಮೇಲೆ ಹಾರಾಡಿದ ರಣಹದ್ಧು ಸುಲಲಿತವಾಗಿ ಉತ್ತರ ದಿಕ್ಕಿನ ಕಡೆ ಹಾರಿ ಕಣ್ಮರೆಯಾಗಿದೆ.

ಈ ರಣಹದ್ದಿನ ಕಾಲಿಗೆ ವಿಶೇಷ ಗುರುತಿನ ನೀಲಿ ಬಣ್ಣ ಉಂಗುರವನ್ನು ಹಾಕಲಾಗಿದೆ. ಉಂಗುರದ ಮೇಲೆ ಇಂಗ್ಲೀಷ್ ಅಕ್ಷರದಲ್ಲಿ ಸಿಯು, ಸಿಯು ಎಂದು ಮುದ್ರಿಸಲಾಗಿದೆ. ಇದನ್ನು ಆಧರಿಸಿ ಮುಂದೊಂದು ದಿನ ರಣಹದ್ದು ಹೊಸಪೇಟೆಯ ಪ್ರದೇಶದಲ್ಲಿ ಕಾಣಿಸಕೊಂಡು ರಕ್ಷಿಸಲ್ಪಟ್ಟಿತ್ತು ಎಂಬುದನ್ನು ಸುಲಭವಾಗಿ ಗುರುತಿಸಬಹುದು ಎಂದು ಡಾ. ಸಮ್ಮದ್ ಕೊಟ್ಟೂರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎನ್.ಕಿರಣ್, ತಜ್ಞ ಪಶುವೈದ್ಯೆ ಡಾ.ವಾಣಿ, ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು, ಹವ್ಯಾಸಿ ಛಾಯಾಗ್ರಾಹಕ ಶಿವಶಂಕರ ಬಣಗಾರ ಹಾಗೂ ಮೃಗಾಲಯದ ಸಿಬ್ಬಂದಿ ಹಾಜರಿದ್ದರು.

ಇದನ್ನೂ ಓದಿ :ಸ್ಮಶಾನದಲ್ಲಿ ಸೆರೆಸಿಕ್ಕ ಹಿಮಾಲಯದ​ ದೈತ್ಯ ಗರುಡ: 6 ಅಡಿ ಉದ್ದ ರೆಕ್ಕೆಯ ಅಪರೂಪದ ರಣಹದ್ದು!

Last Updated : Jan 14, 2023, 2:39 PM IST

ABOUT THE AUTHOR

...view details