ಕರ್ನಾಟಕ

karnataka

ETV Bharat / state

ಅಯೋಗ್ಯರು ವಾಮಮಾರ್ಗದಿಂದ ಈ ಉಪಚುನಾವಣೆ ಎದುರಿಸುತ್ತಿದ್ದಾರೆ.. ರಾಯರೆಡ್ಡಿ ವಾಗ್ದಾಳಿ - By election 2019

ಉಪಚುನಾವಣೆ ಸಮೀಪುಸುತ್ತಿದೆ. ವಿಜಯನಗರದ ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್​​ ಮಗನ ಮದುವೆ ನೆಪ ಹೇಳಿ ವಾಮಮಾರ್ಗದಲ್ಲಿ ಚುನಾವಣೆ ಎದುರಿಸಲು ಹೊರಟಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಉಪಚುನಾವಣೆ ಉಸ್ತುವಾರಿ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ.

Basavaraj Rayareddy
ಆನಂದ್​​ ಸಿಂಗ್​ ಮೇಲೆ ಬಸವರಾಜ ರಾಯರೆಡ್ಡಿ ಆರೋಪ

By

Published : Nov 27, 2019, 7:18 PM IST

ಬಳ್ಳಾರಿ:ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಎದುರಾದ ಈ ಉಪಚುನಾವಣೆಯನ್ನು ಆಯೋಗ್ಯ (ಅನರ್ಹ) ಶಾಸಕರು ವಾಮಮಾರ್ಗದಿಂದ ಎದುರಿಸಲು ಹೊರಟಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಬಸವರಾಜ ರಾಯರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಡಿಸೆಂಬರ್ 1ರಂದು ಅವರ ಪುತ್ರನ ವಿವಾಹವನ್ನ ಅದ್ಧೂರಿಯಾಗಿ ಮಾಡಲು‌ ಹೊರಟಿದ್ದಾರೆ. ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ತಿಳಿಸಿದರು.

ಅವರ ಪುತ್ರನ ವಿವಾಹದ ನೆಪದಲ್ಲಿ ಸರಿಸುಮಾರು ಎರಡು ಕೋಟಿ ರೂ.ಗಳ ಹಣವನ್ನ ಭೋಜನ ಕೂಟಕ್ಕೆ ಖರ್ಚು ಮಾಡುತ್ತಿದ್ದಾರೆ. 2.6 ಮತದಾರರಿಗೆ ಅಂದಾಜು 8 ಗ್ರಾಂನ 51 ಸಾವಿರ ಗೋಲ್ಡ್ ಕಾಯಿನ್ ಹಂಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ABOUT THE AUTHOR

...view details