ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಹಾಗೂ ಕುರುವತ್ತಿ ಬಸವೇಶ್ವರ ಜಾತ್ರಾ ಮಹೋತ್ಸವವನ್ನು ಕೋವಿಡ್ ಹಿನ್ನೆಲೆ ರದ್ದು ಮಾಡಲಾಗಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಆಯುಕ್ತ ಪ್ರಕಾಶ ರಾವ್ ಹೇಳಿದ್ದಾರೆ.
ಬಳ್ಳಾರಿ; ಮೈಲಾರಲಿಂಗೇಶ್ವರ, ಕುರುವತ್ತಿ ಬಸವೇಶ್ವರ ಜಾತ್ರೆ ರದ್ದು - Bellary District Collector Pawan Kumar Malapati
ಕರ್ನಾಟಕದ ಪ್ರಸಿದ್ಧ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಹಾಗೂ ಕುರುವತ್ತಿ ಬಸವೇಶ್ವರ ಜಾತ್ರೆಗಳನ್ನು ಕೊರೊನಾ ಹಿನ್ನೆಲೆ ರದ್ದುಪಡಿಸಲಾಗಿದೆ.
ಮೈಲಾರಲಿಂಗೇಶ್ವರ, ಕುರುವತ್ತಿ ಬಸವೇಶ್ವರ ಜಾತ್ರೆ ರದ್ದು
ನಗರದಲ್ಲಿ ಮಾತನಾಡಿದ ಅವರು, ಮೈಲಾರ ಜಾತ್ರಾ ಕಾರ್ಣಿಕೋತ್ಸವ ಫೆ.19 ರಿಂದ ಮಾರ್ಚ್ 2 ರವರೆಗೆ ನಡೆಯಲಿದೆ. ಮಾರ್ಚ್ 1 ರಂದು ಮೈಲಾರ ಕಾರ್ಣಿಕೋತ್ಸವ ನಡೆಯಲಿದೆ. ಕೋವಿಡ್ ಸಾಂಕ್ರಾಮಿಕ ರೋಗ ಹರಡುವ ಸಂಭವದಿಂದ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದು, ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ನಿರ್ದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕುರುವತ್ತಿ ಮಲ್ಲಿಕಾರ್ಜುನ ಬಸವೇಶ್ವರ ಜಾತ್ರಾ ಮಹೋತ್ಸವ ಮಾರ್ಚ್ 7 ರಿಂದ 15 ರವರೆಗೆ ನಡೆಯಲಿದೆ. ಈ ದಿನದಲ್ಲಿ ದೇವರ ದರ್ಶನವಿರುವುದಿಲ್ಲ. ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಬಾರದು ಎಂದು ಹೇಳಿದರು.