ಕರ್ನಾಟಕ

karnataka

ETV Bharat / state

ಐಟಿಐ ಮುಗಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್​​​ ಸಂದರ್ಶನ - news kannada

ನಿರುದ್ಯೋಗ ಹೋಗಲಾಡಿಸುವ ನಿಟ್ಟಿನಲ್ಲಿ ಬಳ್ಳಾರಿಯ ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಐಟಿಐ ಮುಗಿದ ಅನೇಕ ಯುವಕರಿಗಾಗಿ ಇಂದು ಕ್ಯಾಂಪಸ್​ ಡ್ರೈವ್​ ನಡೆಸಲಾಯಿತು.

ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಐಟಿಐ ಮುಗಿದ ಯುವಕರಿಗಾಗಿ ಕ್ಯಾಂಪಸ್​ ಸಂದರ್ಶನ ನಡೆಸಲಾಯಿತು

By

Published : Apr 27, 2019, 9:10 PM IST

Updated : Apr 27, 2019, 9:43 PM IST

ಬಳ್ಳಾರಿ: ನಗರದ ರೇಡಿಯೋ ಪಾರ್ಕ್​ನಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಇಂದು ಹೋಂಡಾ ಮೋಟರ್​ ಸೈಕಲ್ ಸಂಸ್ಥೆಯಿಂದ ಐಟಿಐ ಮತ್ತು ಡಿಪ್ಲೋಮಾ ಓದಿದ ವಿದ್ಯಾರ್ಥಿಗಳಿಗೆ ಕ್ಯಾಂಪಸ್​ ಡ್ರೈವ್​ ನಡೆಸಲಾಯಿತು.

ಹೋಂಡಾ ಮೋಟರ್ ಸೈಕಲ್ ಸಂಸ್ಥೆಯಿಂದ ಕೋಲಾರ​ ಜಿಲ್ಲೆಯ ನರಸಾಪುರ ಕೈಗಾರಿಕೆ ವಲಯದಲ್ಲಿ ಸಹಾಯಕ, ಅಪರೇಟರ್, ಸೆಮಿ‌ಸ್ಕಿಲ್​ ಅಪರೇಟರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಿತು.

ಸರ್ಕಾರಿ ಕೈಗಾರಿಕಾ ಸಂಸ್ಥೆಯಲ್ಲಿ ಐಟಿಐ ಮುಗಿದ ಯುವಕರಿಗಾಗಿ ಕ್ಯಾಂಪಸ್​ ಸಂದರ್ಶನ ನಡೆಸಲಾಯಿತು

ಈ ಬಗ್ಗೆ ಮಾತನಾಡಿದ ಹೋಂಡಾ ಮೋಟರ್​ ಸೈಕಲ್ ಸಂಸ್ಥೆಯ ಹೆಚ್ಆರ್ ಸತೀಶ್ ಕುಮಾರ್, ಒಟ್ಟು 300 ವಿದ್ಯಾರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದರು. ಕ್ಯಾಂಪಸ್​ ಡ್ರೈವ್​ನಲ್ಲಿ ನೂರಾರಿ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Last Updated : Apr 27, 2019, 9:43 PM IST

ABOUT THE AUTHOR

...view details