ಕರ್ನಾಟಕ

karnataka

ETV Bharat / state

ರಾಜ್ಯ ಬಜೆಟ್ ಮಂಡನೆ ಹಿನ್ನಲೆ: ಗಣಿ ಜಿಲ್ಲೆ ಜನರ ನಿರೀಕ್ಷೆಗಳೇನು? - ಸಿರಿಗೇರಿ ಪನ್ನರಾಜ

ಮಾರ್ಚ್ 8 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಲಿರುವ 2012-22ನೇ ಸಾಲಿನ ಮುಂಗಡ ಆಯವ್ಯಯ ಮಂಡನೆಯಲ್ಲಿ ಗಣಿ ಜಿಲ್ಲೆಯ ಬಹುಮುಖ್ಯ ಬೇಡಿಕೆಯಾದ ಕೃಷಿ ಪದವಿ ಕಾಲೇಜು ಆರಂಭದ ಬಗ್ಗೆ ಹಿರಿಯ ಲೆಕ್ಕಪರಿಶೋಧಕರಾದ ಸಿರಿಗೇರಿ ಪನ್ನರಾಜ ಅವರು ಈಟಿವಿ ಭಾರತ ದೊಂದಿಗೆ ಮಾತನಾಡಿದ್ದಾರೆ.

Sirigeri Pannaraja
ಸಿರಿಗೇರಿ ಪನ್ನರಾಜ

By

Published : Mar 6, 2021, 4:02 PM IST

ಬಳ್ಳಾರಿ: ಗಣಿನಗರಿ ಬಳ್ಳಾರಿ ತಾಲೂಕಿನ ಹಗರಿ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೃಷಿ ಪದವಿ ಕಾಲೇಜು ಈ ಬಾರಿಯಾದರೂ ಶುರುವಾಗಲಿದೆಯಾ ಎಂಬ ಆಶಾಭಾವನೆಯನ್ನ ಹಿರಿಯ ಲೆಕ್ಕಪರಿ ಶೋಧಕ ಸಿರಿಗೇರಿ ಪನ್ನರಾಜ ಹೊಂದಿದ್ದಾರೆ.

ಮಾರ್ಚ್ 8 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡಿಸಲಿರುವ 2012-22ನೇ ಸಾಲಿನ ಮುಂಗಡ ಆಯವ್ಯಯ ಮಂಡನೆಯಲ್ಲಿ ಗಣಿಜಿಲ್ಲೆಯ ಬಹುಮುಖ್ಯ ಬೇಡಿಕೆಯಾದ ಕೃಷಿ ಪದವಿ ಕಾಲೇಜು ಆರಂಭದ ಬಗ್ಗೆ ಹಿರಿಯ ಲೆಕ್ಕಪರಿಶೋಧಕರಾದ ಸಿರಿಗೇರಿ ಪನ್ನರಾಜ ಅವರು ಈ ಟಿವಿ ಭಾರತದೊಂದಿಗೆ ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ

ಗಣಿಜಿಲ್ಲೆಯಲ್ಲಿ ಕೃಷಿ ಪದವಿ‌ ಕಾಲೇಜು ಆರಂಭಕ್ಕೆ ಅಗತ್ಯ ಅನುದಾನವನ್ನ ಜಿಲ್ಲಾ ಖನಿಜ ನಿಧಿಯಲ್ಲಿ ಮೀಸಲಿರಿಸಲಾಗಿದೆ. ಕಾಲೇಜು ಆರಂಭಕ್ಕೆ 5 ಕೋಟಿ‌ ರೂ.ಗಳ ಅನುದಾನವೂ ಕೂಡ ಬಿಡುಗಡೆಯಾಗಿದೆ. ಆದರೆ, ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದಾಗಿ ಅದು ನನೆಗುದಿಗೆ ಬಿದ್ದಿದೆ. ನೀವೇ ಸ್ವತಃ ವಿಶೇಷ ಕಾಳಜಿ ವಹಿಸಿ ಈ ಭಾಗಕ್ಕೆ ಕೃಷಿ ಪದವಿ ಕಾಲೇಜು ಆರಂಭಕ್ಕೆ ಪ್ರಾತಿನಿಧ್ಯ ನೀಡೋದಾದ್ರೆ ನೀಡಿ, ಇಲ್ಲಾಂದ್ರೆ ನಮ್ಮೊಂದಿಗೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ. ಇಲ್ಲಾಂದ್ರೆ ಜಿಲ್ಲೆಯ ಜ‌ನರು ನಿಮ್ಮನ್ನ ಮೆಚ್ಚಿಕೊಳ್ಳೋದಿಲ್ಲ ಎಂದು ಸ್ಥಳೀಯ ಜನ ಪ್ರತಿನಿಧಿಗಳಿಗೆ ಎಚ್ಚರಿಕೆ ಸಂದೇಶವನ್ನ ನೀಡಿದ್ದಾರೆ.

ಇದಲ್ಲದೇ, ಗಣಿಜಿಲ್ಲೆಯ ಸ್ಪಾಂಜ್ ಐರನ್ ಘಟಕಗಳ ಪುನಶ್ಚೇತನ ಹಾಗೂ ಪುನರ್ ಜ್ಜೀವನ ನೀಡೋ ಕಾರ್ಯ ಆಗಬೇಕಿದೆ. ಈ ಬಾರಿಯ ಬಜೆಟ್‌ನಲ್ಲಿ ಅದಕ್ಕೆ ಒತ್ತು ನೀಡಬೇಕು. ಇದರಿಂದ ಉದ್ಯೋಗ ಅವಕಾಶ ಸೃಷ್ಟಿಗೆ ವಿಫುಲ ಅವಕಾಶ ದೊರೆಕಲಿದೆ. ಶಿಕ್ಷಣ, ಆರೋಗ್ಯ ಹಾಗೂ ಜೀನ್ಸ್ ಉತ್ಪನ್ನಗಳ ಘಟಕ ಸ್ಥಾಪನೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆದ್ಯತೆ ನೀಡಬೇಕೆಂದು ಸಿರಿಗೇರಿ ಪನ್ನರಾಜ ಆಗ್ರಹಿಸಿದ್ದಾರೆ.

ABOUT THE AUTHOR

...view details