ಕರ್ನಾಟಕ

karnataka

ETV Bharat / state

ವಿಜಯನಗರ ಜಿಲ್ಲೆಯಿಂದ ಪಶ್ಚಿಮ ತಾಲೂಕುಗಳಿಗೆ ಬಲ - western taluks have benefits

ರಾಜ್ಯ ಸರ್ಕಾರ ವಿಜಯನಗರವನ್ನು ಜಿಲ್ಲೆಯನ್ನಾಗಿ ಮಾಡಲು ನಿರ್ಧರಿಸಿದ್ದು, ಇದರಿಂದ ಪಶ್ಚಿಮ ತಾಲೂಕುಗಳಿಗೆ ಹೆಚ್ಚಿನ ಅನುಕೂಲವಾಗಿದೆ.

Hospet district
ಹೊಸಪೇಟೆ ಜಿಲ್ಲೆ

By

Published : Nov 25, 2020, 4:37 PM IST

ಹೊಸಪೇಟೆ: ವಿಜಯನಗರ ಜಿಲ್ಲೆ ರಚನೆ ಮಾಡುವುದರಿಂದ ಪಶ್ಚಿಮ ತಾಲೂಕುಗಳಿಗೆ ಅನುಕೂಲವಾಗಿಲಿದೆ. ಜಿಲ್ಲಾ ಕೇಂದ್ರಕ್ಕೆ ಸುಲಭವಾಗಿ ಜನರು ಕೆಲಸ‌ ಕಾರ್ಯಗಳಿಗೆ ಓಡಾಟ ಮಾಡಬಹುದಾಗಿದೆ.‌ ಹಿಂದುಳಿತ ತಾಲೂಕುಗಳು ಎಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗುತ್ತದೆ.

ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ವೈ.ಯಮುನೇಶ್

ಜಿಲ್ಲೆಯ ‌ಪಶ್ಚಿಮ ತಾಲೂಕುಗಳಾದ ಹಗರಿಬೊಮ್ಮನಹಳ್ಳಿ , ಹೂವಿನಹಡಗಲಿ, ಕೂಡ್ಲಿಗಿ ಮತ್ತು ಹರಪನಹಳ್ಳಿ ತಾಲೂಕುಗಳು ಹಿಂದುಳಿದ ತಾಲೂಕುಗಳು ಎಂದು ಹಲವು ತಜ್ಞರ ಸಮಿತಿ ವರದಿಯಿಂದ ತಿಳಿದು ಬಂದಿದೆ.‌ ಕೂಡ್ಲಿಗಿ ತಾಲೂಕಿನ ಆಲೂರು, ಖಾನಾಹೊಸಳ್ಳಿ, ಟಿ.ಕಲ್ಲಹಳ್ಳಿ, ಹಿರೇಕುಂಬಲಗುಂಟೆ, ಕಾನಾಮೊಡಗು, ಹುಲಿಕೇರೆ, ಕೆಂಚಮಲ್ಲನಹಳ್ಳಿ, ಹೂವಿನಹಡಗಲಿ ತಾಲೂಕಿನ ಹರವಿ, ಬಸಾಪುರ ಗ್ರಾಮಗಳು ಬಳ್ಳಾರಿ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀಕ್ಕಿಂತ ಹೆಚ್ಚು ದೂರದಲ್ಲಿದ್ದು, ಇನ್ನು ವಿಜಯನಗರ ಜಿಲ್ಲೆ ರಚನೆಯಿಂದ ಹಗರಿಬೊಮ್ಮನಹಳ್ಳಿ - 39 ಕಿ.ಮೀ, ಹೂವಿನಹಡಗಲಿ-72 ಕಿ.ಮೀ, ಹರಪನಹಳ್ಳಿ- 80 ಕಿ.ಮೀ, ಕೊಟ್ಟೂರು-65 ಕಿ.ಮೀ ದೂರ ಆಗಲಿದೆ.

ಹೊಸಪೇಟೆ ರೈಲ್ವೇ ನಿಲ್ದಾಣ

2015 ಮೇ ತಿಂಗಳಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ.ನಾಗೂರ್ ಅವರು ಬಳ್ಳಾರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಯೋಜನಾ ಸಮಿತಿಯಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ 2014ರ ವರದಿ ಮಂಡಿಸಿದ್ದರು. ಸುಸ್ಥಿರ ಹಾಗೂ ಸಮತೋಲನದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಗರಿಬೊಮ್ಮನಹಳ್ಳಿ, ಹಡಗಲಿ ತಾಲೂಕುಗಳು ಅತ್ಯಂತ ಹಿಂದುಳಿದಿದಿದ್ದು, ಸಾಕ್ಷರತಾ ಸೂಚ್ಯಂಕದಲ್ಲಿ ಕೂಡ್ಲಿಗಿ ತಾಲೂಕು ಕಡೇ ಸ್ಥಾನದಲ್ಲಿದೆ. ಹೊಸಪೇಟೆ ಹಾಗೂ ಹಗರಿಬೊಮ್ಮನಹಳ್ಳಿ ಮಧ್ಯದಲ್ಲಿ ಶಿಕ್ಷಣ ಮೊಟಕುಗೊಳಿಸಿದವರ ಸಂಖ್ಯೆ ಹೆಚ್ಚಾಗಿದೆ.

ಇನ್ನು 2018ರ ಜುಲೈ ತಿಂಗಳಲ್ಲಿ ರಾಜ್ಯ ಸರ್ವ ಶಿಕ್ಷಣ ಅಭಿಯಾನದ ವಿಭಾಗವು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಶಾಲೆ ಅರ್ಧಕ್ಕೆ ತೊರೆದ ವಿದ್ಯಾರ್ಥಿಗಳ ಪ್ರಮಾಣದಲ್ಲಿ ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ.‌ ವಿಶೇಷವಾಗಿ ಪಶ್ಚಿಮ ತಾಲೂಕುಗಳ‌ ಜನರು ಬೇಸಿಗೆ ಕಾಲದಲ್ಲಿ ಕೂಲಿ ಅರಸುತ್ತ ಬೇರೆ ಕಡೆಗೆ ವಲಸೆ ಹೋಗುವುದರಿಂದ ಮಕ್ಕಳ ಪೋಷಕರ ಜೊತೆ ತೆರಳುವುದರಿಂದ ಅವರ ಕಲಿಕೆಗೆ ಅರ್ಧಕ್ಕೆ ಮೊಟಕುಗೊಳ್ಳುತ್ತಿದೆ ಎಂದು ತಿಳಿಸಿದೆ.

ಬಳ್ಳಾರಿ ಜಿಲ್ಲೆಯಲ್ಲಿ 11 ತಾಲೂಕುಗಳು ಬರುತ್ತವೆ. ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರ, ಕಂಪ್ಲಿ, ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು ತಾಲೂಕುಗಳಿವೆ. ಈಗ ನೂತನ ವಿಜಯನಗರ ಜಿಲ್ಲಾ ಘೋಷಣೆ ಕುರಿತು ಪ್ರಸ್ತಾವನೆಯಲ್ಲಿ ಬಳ್ಳಾರಿ ಜಿಲ್ಲೆಗೆ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು, ಕಂಪ್ಲಿ ಸೇರ್ಪಡೆಗೊಳಿಸಲಾಗಿದೆ. ಇನ್ನು ವಿಜಯನಗರ ಜಿಲ್ಲೆಗೆ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು ತಾಲೂಕುಗಳು ಸೇರ್ಪಡೆಯಾಗುತ್ತವೆ‌.

2011 ಜನಗಣತಿ ಪ್ರಕಾರ, ಬಳ್ಳಾರಿ ಒಟ್ಟು ಜನಸಂಖ್ಯೆ 27,54,598 ಹಾಗೂ 24,45,351 ಎಕೆರೆ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದೆ.‌ ಎರಡು ಜಿಲ್ಲೆ ರಚನೆಗೊಳ್ಳುವುದರಿಂದ ಭೌಗೋಳಿಕ‌ ವಿಸ್ತೀರ್ಣ ಹಾಗೂ ಜನಸಂಖ್ಯೆ ಪ್ರಮಾಣ ಕಡಿಮೆಯಾಗಲಿದೆ. ಆಗ ಬಳ್ಳಾರಿ ಜಿಲ್ಲೆಯ 10,50,690 ಎಕೆರೆ ಭೌಗೋಳಿಕ ವಿಸ್ತೀರ್ಣ ಹಾಗೂ 14,00,970 ಜನಸಂಖ್ಯೆ ಆಗಲಿದೆ. ವಿಜಯನಗರ ಜಿಲ್ಲೆ 13,92,750 ಎಕರೆ ಭೌಗೋಳಿಕ ವಿಸ್ತೀರ್ಣ ಇರಲಿದೆ.

ಈ ಕುರಿತು ವಿಜಯನಗರ ಜಿಲ್ಲಾ ಹೋರಾಟ ಸಮಿತಿ ಸಂಚಾಲಕ ವೈ.ಯಮುನೇಶ್​ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ವಿಜಯನಗರ ಜಿಲ್ಲೆ ರಚನೆಯಿಂದ ವೈದ್ಯಕೀಯ ಸೌಲಭ್ಯಗಳು ಹೆಚ್ಚು ಸಿಗಲಿವೆ. ಅಲ್ಲದೇ ಪ್ರವಾಸೋದ್ಯಮ ಬೆಳವಣಿಗೆ ಸಹಕಾರಿಯಾಗಲಿದೆ.‌ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ‌ ಸಿಗಲಿದೆ. ಆಡಳಿತಾತ್ಮಕವಾಗಿ ಸಹ ಅನಕೂಲವಾಗಲಿದೆ ಎಂದು ಹೇಳಿದರು.

ABOUT THE AUTHOR

...view details