ಬಳ್ಳಾರಿ:ಜಿಲ್ಲೆಯ ವಿಜಯನಗರ ಉಪಚುನಾವಣೆ ನಿಮಿತ್ತ ಹೊಸಪೇಟೆ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮತಗಟ್ಟೆ 21 ರಲ್ಲಿ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಕುಟುಂಬದವರು ಮತದಾನ ಮಾಡಿದ್ರು.
ಉಪಚುನಾವಣೆ ಹಿನ್ನೆಲೆ: ಜೆಡಿಎಸ್ - ಬಿಜೆಪಿ ಅಭ್ಯರ್ಥಿಗಳಿಂದ ಮತದಾನ - ವಿಜಯನಗರ ಉಪಚುನಾವಣೆ
ವಿಜಯನಗರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಶಾಂತಿಯುತ ಮತದಾನ ನಡೆಯುತ್ತಿದೆ. ಜನರ ತೀರ್ಪು ಎಲ್ಲರ ಗಮನ ಸೆಳೆಯಲಿದೆ.
ಉಪಚುನಾವಣೆ ಹಿನ್ನಲೆ: ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳಿಂದ ಮತದಾನ
ಆನಂದಸಿಂಗ್ ಜೊತೆ ಪತ್ನಿ ಲಕ್ಷ್ಮೀ ಆನಂದಸಿಂಗ್, ಮಗ ಸಿದ್ಧಾರ್ಥ ಸಿಂಗ್ ಹಾಗೂ ಅವರ ಸೊಸೆ ಸಂಜನಾ ಅವರೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿ ಗೆಲುವಿವ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕಾಗವಾಡ ವಿಧಾನಸಭಾ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ ತಮ್ಮ ಸ್ವಗ್ರಾಮ ಮೋಳೆ ಗ್ರಾಮದಲ್ಲಿ ಮತ ಚಲಾವಣೆ ಮಾಡಿದರು. ಮೋಳೆ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ವಾರ್ಡ್ ನಂಬರ್ 44 ರಲ್ಲಿ ಮತದಾನ ಮಾಡಿದ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ ಈ ಬಾರಿ ನೂರಕ್ಕೆ ನೂರು ಪ್ರತಿಶತ ಗೆಲವೂ ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.