ಬಳ್ಳಾರಿ: ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಭೂಮಿ ಮಾರಾಟ ವಿವಾದದ ಹಿನ್ನಲೆಯಲ್ಲಿ ಇಬ್ಬರು ವರ್ತಕರ ನಡುವೆ ಜಗಳ ಉಂಟಾಗಿ, ಒಬ್ಬ ವರ್ತಕನ ಕೊಲೆ ಮಾಡಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಬಳ್ಳಾರಿ: ಭೂಮಿ ಮಾರಾಟ ವಿವಾದದಲ್ಲಿ ವರ್ತಕನ ಕಗ್ಗೊಲೆ - land selling dispute
ಭೂಮಿ ಮಾರಾಟ ವಿವಾದದ ಹಿನ್ನಲೆಯಲ್ಲಿ ವರ್ತಕನ ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೃತರ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

businessman-killed-in-land-selling-dispute
ಕೊಟ್ಟೂರು ಪಟ್ಟಣದ ವರ್ತಕ ಜಿ.ವೆಂಕಟೇಶ (44) ಎಂಬುವವರೇ ಮೃತ ವ್ಯಕ್ತಿ. ಭೂಮಿ ಮಾರಾಟ ವಿಚಾರದಲ್ಲಿ ಇವರ ಸಹೋದರರು ಅಕ್ಷೇಪಿಸಿದ ಕಾರಣಕ್ಕಾಗಿಯೇ ಭೂಮಿ ಮಾರಾಟ ಮಾಡೋದಿಲ್ಲ ಎಂದು ಯೂ ಟರ್ನ್ ಹೊಡೆದ ವೆಂಕಟೇಶನ ಮೇಲೆ ಮತ್ತೋರ್ವ ವರ್ತಕ ಶಂಭುನಾಥ ಅವರು ಮಾರಣಾಂತಿಕ ಹಲ್ಲೆ ನಡೆಸಿದ್ದರ ಪರಿಣಾಮ ವೆಂಕಟೇಶ ಸಾವಿಗೀಡಾಗಿದ್ದಾರೆ ಎಂದು ಅವರ ಸಹೋದರ ಜಿ.ನಾಗರಾಜ ದೂರಿದ್ದಾರೆ.
ಮಾರಣಾಂತಿಕ ಹಲ್ಲೆ ನಡೆಸಿದ ಶಂಭುನಾಥನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮೃತರ ಸಹೋದರ ನಾಗರಾಜ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೊಟ್ಟೂರು ಸಿಪಿಐ ದೊಡ್ಡಣ್ಣ ತಿಳಿಸಿದ್ದಾರೆ.