ಕರ್ನಾಟಕ

karnataka

ETV Bharat / state

ಹೊಸಪೇಟೆ: ಬಸ್ ಸಿಲುಕಿಕೊಂಡು ಹಂಪಿ ಸ್ಮಾರಕಕ್ಕೆ ಧಕ್ಕೆ - ಹಂಪಿ ವಿಜಯ ವಿಠಲ ದೇವಸ್ಥಾನ

ಹಂಪಿಯ ವಿಜಯವಿಠ್ಠಲ ದೇವಸ್ಥಾನವನ್ನು ವೀಕ್ಷಣೆ ಮಾಡಲು ತೆರಳುವಾಗ ಬಸ್ ಮಂಟಪದೊಳಗೆ ಸಿಲುಕಿಕೊಂಡಿದ್ದು, ಕೆಲ ಕಾಲ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.

hampi monument damage
ಹಂಪಿ ಸ್ಮಾರಕಕ್ಕೆ ಧಕ್ಕೆ

By

Published : Jan 26, 2021, 2:07 PM IST

ಹೊಸಪೇಟೆ:ಹಂಪಿ ವಿಜಯ ವಿಠಲ ದೇವಸ್ಥಾನಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿನ ಮಂಟಪದೊಳಗೆ ಬಸ್ ಸಿಲುಕಿಕೊಂಡು, ಸ್ಮಾರಕಕ್ಕೆ ಹಾನಿಯಾಗಿದೆ.

ವಿಜಯವಿಠ್ಠಲ ದೇವಸ್ಥಾನವನ್ನು ವೀಕ್ಷಣೆ ಮಾಡಲು ತೆರಳುವಾಗ ಬಸ್ ಸಿಲುಕಿಕೊಂಡಿದ್ದು, ಕೆಲ ಕಾಲ ಸಂಚಾರಕ್ಕೆ ತೊಂದರೆಯಾಗಿದೆ. ಈ ಮಾರ್ಗವಾಗಿ ಬಸ್ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರು ಆಗ್ರಹಿಸಿದರು.

ಈಟಿವಿ ಭಾರತ್ ದೊಂದಿಗೆ ದೂರವಾಣಿ ಮೂಲಕ ಸರ್ವೇಕ್ಷಣ ಇಲಾಖೆಯ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿ ಮುತ್ತು ಮಾತನಾಡಿ, ರಜೆಯಲ್ಲಿರುವೆ. ಹಾಗಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವೆ. ಬಳಿಕ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ABOUT THE AUTHOR

...view details