ಹೊಸಪೇಟೆ: ನಕಲಿ ದಾಖಲೆಗಳನ್ನು ಸೃಷ್ಟಿಸಿ ನಗರದ ಗಾಂಧಿ ವೃತ್ತದ ಬಳಿ 16/65 ಅಳತೆಯ ಕಟ್ಟಡ ಮಾರಾಟ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಹೊಸಪೇಟೆಯ ಪ್ರಭಾರ ಉಪನೋಂದಣಾಧಿಕಾರಿ ಎನ್. ತಿಪ್ಪೇಸ್ವಾಮಿ ಹಾಗೂ ಪತ್ರ ಬರಹಗಾರ ಸಾಯಿನಾಥರಾವ್ ಸಿಂಧೆ ಎಂಬುವವರನ್ನು ಪಟ್ಟಣ ಠಾಣೆ ಪೊಲೀಸರು ವಂಚನೆ ಪ್ರಕರಣದಡಿ ಬಂಧಿಸಿದ್ದಾರೆ.
ವಂಚನೆಗೊಳಗಾದ ನಗರದ ನಿವಾಸಿ ಪಾಯಲ್ ಜೈನ್ ಎನ್ನುವವರು ಡಿ. 8ರಂದು ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ನಗರಸಭೆ ಅಧಿಕಾರಿ ಹಾಗೂ ಆರೋಪಿಗಳಾದ ನಜೀರ್ ಅಹ್ಮದ್ ಹಾಗೂ ಶಂಶಾದ್ ಬೇಗಂ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಠಾಣೆಯ ಪಿಐ ಎಂ. ಶ್ರೀನಿವಾಸ ತಿಳಿದರು.