ಹೊಸಪೇಟೆ: ಗುರಿಯನ್ನು ಮುಟ್ಟುಲು ವಿದ್ಯಾರ್ಥಿಗಳು ಆತ್ಮ ವಿಶ್ವಾಸವನ್ನು ಬೆಳಸಿಕೊಳ್ಳಬೇಕು. ಕಿಳಿರಿಮೆಯ ಭಾವನೆಯನ್ನು ತೆಗೆದು ಹಾಕಬೇಕು. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ. ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಇವುಗಳನ್ನು ತಲಪಲು ದೊಡ್ಡದಾದ ತೊಂದರೆಗಳು ಬರುತ್ತವೆ ಅವುಗಳನ್ನು ಮೆಟ್ಟಿ ನಿಲ್ಲಬೇಕು ಎಂದು ಗದಗ- ವಿಜಯಪುರ ರಾಮಕೃಷ್ಣ ಆಶ್ರಮದ ಅಧ್ಯಕ್ಷ ನಿರ್ಭಯನಂದ ಸ್ವಾಮೀಜಿ ತಿಳಿಸಿದರು.
ಗುರಿ ಮುಟ್ಟಲು ಆತ್ಮ ವಿಶ್ವಾಸವನ್ನು ಬೆಳಿಸಿಕೊಳ್ಳಿ : ನಿರ್ಭಯನಂದ ಸ್ವಾಮಿ
157 ನೇ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ನಿರ್ಭಯನಂದ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಜೀವನದ ಪಾಠ ಮಾಡಿದರು.
ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು 157 ನೇ ಸ್ವಾಮಿ ವಿವೇಕಾನಂದ ಜಯಂತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ದೇಶಕ್ಕೆ ಒಬ್ಬ ಆದರ್ಶ ವ್ಯಕ್ತಿ. ಅವರು ಚಿಂತನೆಗಳು ಆಲೋಚನೆಗಳನ್ನು ಭಾರತೀಯ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಅವರ ಒಂದು ಗುರಿ ಎನೇಂದರೆ ಪ್ರಪಂಚದಲ್ಲಿ ಯಾರು ಮಾಡಲಾಗದ ಸಾಧನೆಯನ್ನು ಮಾಡಬೇಕು ಎಂಬ ಗುರಿ ಮತ್ತು ಕನಸನ್ನು ಕಂಡಿದ್ದರು ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸದ ಮಾತುಗಳನ್ನಾಡಿದರು.
ಭಾರತೀಯ ಪ್ರತಿಯೊಬ್ಬ ಪ್ರಜೆಯು ಸ್ವಾಮಿ ವಿವೇಕಾನಂದರಂತೆ ಕಾಣಬೇಕು. ಸಾಧನೆಯ ವ್ಯಕ್ತಿಯನ್ನು ಮಾದರಿಯಗಿಟ್ಟಯಕೊಳ್ಳಬೇಕು.ಅವರಿಗಿಂತ ಹೆಚ್ಚಿನ ಶಕ್ತಿಯಲ್ಲಿ ಸಾಧನೆಯನ್ನು ಮಾಡಬೇಕು.ಯಾವ ಕ್ಷೇತ್ರದಲ್ಲಿ ಆಸಕ್ತಿಯಿದೆ ಅದನ್ನು ಕಷ್ಟಪಟ್ಟು ಕೆಲಸವನ್ನು ಮಾಡಬೇಕು. ಅದರ ಬಗ್ಗೆ ನಂಬಿಕೆ ಪ್ರೀತಿ ಗೌರವದಿಂದ ಕಾಣಬೇಕು. ಗುರಿಯನ್ನು ಮುಟ್ಟುವ ತನಕ ನಾವು ಮನಸನ್ನು ಬೇರೆ ಕಡೆ ಗಮನ ಹರಿಸಬಾರದು ಎಂದು ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸಿದರು.