ಕರ್ನಾಟಕ

karnataka

ETV Bharat / state

ಎಮ್ಮೆ ಮೇಯಿಸಲು ಹೋದ ಅಣ್ಣ-ತಂಗಿ ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿ ಸಾವು - ತುಂಗಭದ್ರ ಹಿನ್ನೀರಿನಲ್ಲಿ ಮುಳುಗಿ ಅಣ್ಣ ತಂಗಿ ಸಾವು ಸುದ್ದಿ

ಎಮ್ಮೆ ಮೇಯಿಸಲು ಹೋಗಿದ್ದು, ಹಿನ್ನೀರಿನ ವ್ಯಾಪ್ತಿಯಲ್ಲಿ ಎಮ್ಮೆ ನೀರಿಗೆ ಇಳಿದಿದೆ. ಅದರ ಹಿಂದೇಯೇ ಹೋಗಿದ್ದ ಈ ಬಾಲಕ-ಬಾಲಕಿ ಈಜು ಬಾರದೆ ನೀರಿನಲ್ಲಿ ಮುಳುಗಿದ ಘಟನೆ ನಿನ್ನೆ ಜರುಗಿದೆ.

ಅಣ್ಣ-ತಂಗಿ ತುಂಗಭದ್ರ ಹಿನ್ನೀರಿನಲ್ಲಿ ಮುಳುಗಿ ಸಾವು
ಅಣ್ಣ-ತಂಗಿ ತುಂಗಭದ್ರ ಹಿನ್ನೀರಿನಲ್ಲಿ ಮುಳುಗಿ ಸಾವು

By

Published : Aug 27, 2020, 9:40 AM IST

Updated : Aug 27, 2020, 1:17 PM IST

ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಎರಡನೇ ಕಾಲೋನಿಯ ವ್ಯಾಪ್ತಿಯಲ್ಲಿ ತುಂಗಭದ್ರಾ ಹಿನ್ನೀರಿನಲ್ಲಿ ಬಾಲಕ-ಬಾಲಕಿ ಮುಳುಗಿ ಸಾವನ್ನಪ್ಪಿದ್ದಾರೆ.

ಹಂಪಸಾಗರ ಗ್ರಾಮದ ಟಿ.ಮಂಜುನಾಥ, ಪತ್ನಿ ರತ್ನಮ್ಮ ಹಾಗೂ ಟಿ.ಮಹೇಂದ್ರ, ಪತ್ನಿ ನೀಲಮ್ಮ ಎನ್ನುವ ಸಹೋದರರ ಮಕ್ಕಳಾದ ಬಾಲಕ ಗೌತಮ್ (12), ಬಾಲಕಿ ಗಗನ (14) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಎಮ್ಮೆ ಮೇಯಿಸಲು ಹೋಗಿದ್ದು, ಹಿನ್ನೀರಿನ ವ್ಯಾಪ್ತಿಯಲ್ಲಿ ಎಮ್ಮೆ ನೀರಿಗೆ ಇಳಿದಿದೆ. ಅದರ ಹಿಂದೇಯೇ ಹೋಗಿದ್ದ ಈ ಬಾಲಕ-ಬಾಲಕಿ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಂತರ ವಿಷಯ ತಿಳಿದ ಸಾರ್ವಜನಿಕರು ನೀರಿಗಿಳಿದು ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.

ಎಮ್ಮೆ ಮೇಯಿಸಲು ಹೋದ ಅಣ್ಣ-ತಂಗಿ ತುಂಗಭದ್ರಾ ಹಿನ್ನೀರಿನಲ್ಲಿ ಮುಳುಗಿ ಸಾವು

ಹಗರಿಬೊಮ್ಮನಹಳ್ಳಿ ತಹಶೀಲ್ದಾರ್ ಶಿವಕುಮಾರಗೌಡ ಹಾಗೂ ಹಗರಿಬೊಮ್ಮನಹಳ್ಳಿ ಸಿಪಿಐ ಎಂ.ಎಂ.ಡಪೀನ್, ತಂಬ್ರಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಸರಳಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಿಎಸ್‍ಐ ಸರಳಾ ದೂರು ದಾಖಲಿಸಿಕೊಂಡಿದ್ದಾರೆ.

Last Updated : Aug 27, 2020, 1:17 PM IST

ABOUT THE AUTHOR

...view details