ಹೊಸಪೇಟೆ:ನಗರದಲ್ಲಿಬಿಜೆಪಿ ವತಿಯಿಂದ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ವಿಜಯನಗರ ಕಾಲೇಜಿನಿಂದ ಆರಂಭವಾದ ಯಾತ್ರೆ ವಾಲ್ಮೀಕಿ ವೃತ್ತ ಹಾಗೂ ವಡಕರಾಯ ದೇಗುಲಕ್ಕೆ ತೆರಳಿ ಮುಕ್ತಾಯಗೊಂಡಿತು.
ಹೊಸಪೇಟೆಯಲ್ಲಿ ಬಿಜೆಪಿ ಸಂಕಲ್ಪ ಯಾತ್ರೆ: ಗಾಂಧಿ ಆದರ್ಶಗಳನ್ನು ಪಾಲಿಸಲು ಕರೆ - ಬಳ್ಳಾರಿ ಜಿಲ್ಲೆಯ ಹೊಸಪೇಟೆ
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಬಿಜೆಪಿ ವತಿಯಿಂದ ಸಂಕಲ್ಲ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಜಿಲ್ಲೆಯ ಸಂಸದ ದೇವೇಂದ್ರಪ್ಪ, ಬಿಜೆಪಿ ಪಕ್ಷ ಮಹಾತ್ಮ ಗಾಂಧೀಜಿ ಆದರ್ಶಗಳನ್ನು ಪಾಲಿಸುತ್ತಿದೆ ಎಂದರು.
ಬಿಜೆಪಿ ಸಂಕಲ್ಪ ಯಾತ್ರೆ
ಈ ವೇಳೆ ಮಾತನಾಡಿದ ಸಂಸದ ದೇವೇಂದ್ರಪ್ಪ, ಬಿಜೆಪಿ ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಪಾಲಿಸುತ್ತಿದೆ. ಶಾಂತಿ ಮತ್ತು ಸಹನೆಯನ್ನು ಗಾಂಧೀಜಿ ರೂಢಿಸಿಕೊಂಡು ಬಂದಿದ್ದರು. ನಾವೂ ಬಾಪೂ ಆದರ್ಶಗಳನ್ನು ಅನುಸರಿಸಿಕೊಂಡು ನಡೆದರೆ ಚೆನ್ನಾಗಿ ಜೀವನ ನಡೆಸಬಹುದು ಎಂದರು.