ಕರ್ನಾಟಕ

karnataka

ETV Bharat / state

ಬಿಜೆಪಿ ಜನಾರ್ದನ ರೆಡ್ಡಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಸಾರಿಗೆ ಸಚಿವ ಶ್ರೀರಾಮಲು ಸ್ಪಷ್ಟನೆ

ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಬಿಜೆಪಿ ಕೈಬಿಡಲ್ಲ- 2023ರಲ್ಲೂ ನಮ್ಮದೇ ಪಕ್ಷ ಅಧಿಕಾರಕ್ಕೆ - ಸಚಿವ ಶ್ರೀರಾಮುಲು ವಿಶ್ವಾಸ

Transport Minister Sri Ramalu
ಸಾರಿಗೆ ಸಚಿವ ಬಿ.ಶ್ರೀರಾಮುಲು

By

Published : Dec 24, 2022, 5:46 PM IST

Updated : Dec 24, 2022, 8:05 PM IST

ಸಾರಿಗೆ ಸಚಿವ ಶ್ರೀರಾಮಲು

ಬಳ್ಳಾರಿ:ಜನಾರ್ದನ ರೆಡ್ಡಿ ಈ ಭಾಗದ ಹಿರಿಯ ನಾಯಕರು, ಪಕ್ಷದ ಹಿರಿಯ ನಾಯಕರು ರೆಡ್ಡಿ ಅವರ ಮನವೊಲಿಸುವ ಕೆಲಸ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದರು.

ರಾಜಕೀಯ ನಿರ್ಧಾರದ ಕುರಿತು ನಾಳೆ ಜನಾರ್ದನ ರೆಡ್ಡಿ ಮಾಧ್ಯಮಗೋಷ್ಟಿ ನಡೆಸಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಅವರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸಿಎಂ ಅವರು ಸೇರಿದಂತೆ ರಾಜ್ಯದ ನಾಯಕರು, ಪಕ್ಷದ ಅಧ್ಯಕ್ಷರು ಅವರ ಜತೆಗೆ ಈಗಾಗಲೇ ಮಾತನಾಡಿದ್ದಾರೆ. ಜನಾರ್ದನ ರೆಡ್ಡಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

2023ರಕ್ಕೆ ಬಿಜೆಪಿ ಮತ್ತೆ ಅಧಿಕಾರಕ್ಕೆ: ರಾಜ್ಯದಲ್ಲಿ 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ, ಕಾಂಗ್ರೆಸ್ ಪಕ್ಷದವರು ತಿರುಕನಂತೆ ಕನಸು ಕಾಣುತ್ತಿದ್ದಾರೆ ಎಂದು ಶ್ರೀರಾಮುಲು ವ್ಯಂಗ್ಯವಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಡ್ಡಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ಕಾಂಗ್ರೆಸ್ ನಾಯಕರು ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ. ಸಣ್ಣ ಸಣ್ಣ ವಿಚಾರಗಳಿಗೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಪಾದಿಸಿದರು.

ವೇತನ ಹೆಚ್ಚಳಕ್ಕೆ ಸಮ್ಮತಿ: ಸಾರಿಗೆ ನೌಕರರು ವೇತನ ಹೆಚ್ಚಳಕ್ಕೆ ಹೋರಾಟ ಮಾಡುತ್ತಿದ್ದಾರೆ. ಸಾರಿಗೆ ಸಂಸ್ಥೆಯ ನೌಕರರ ವೇತನ ಪರಿಷ್ಕರಣೆಗೆ ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ. ಆದರ ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿದ್ದಾರೆ.

ವಜಾ ಸಾರಿಗೆ ನೌಕರರ ಮತ್ತೆ ಸೇರ್ಪಡೆ:ವಜಾಗೊಂಡ ಸಾರಿಗೆ ನೌಕರರು joint ಮೆಮೋ ಗೆ ಸಹಿ ಮಾಡಿದ್ರೆ ನಾಳೆಯೇ ಕೆಲ್ಸಕ್ಕೆ ತೆಗೆದುಕೊಳ್ಳುತ್ತೇವೆ. ಆದರೆ joint ಮೆಮೋಗೆ ವಜಾಗೊಂಡ ನೌಕರರು ಸಹಿ ಮಾಡುತ್ತಿಲ್ಲ ಎಂದು ಹೇಳಿದ ಸಚಿವರು, ಬೆಳಗಾವಿ ಸುವರ್ಣಸೌಧ ಮುಂಭಾಗ ನಡೆಸುತ್ತಿರುವ ಹೋರಾಟ ಕೈಬಿಡುವಂತೆ ಎಂದು ಮನವಿ ಮಾಡಿದರು.

ಇದನ್ನೂಓದಿ:ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್​ ನೀಡಲು ಮುಂದಾದ ಅಭಿಮಾನಿಗಳು.. ಬಾದಾಮಿಯಿಂದಲೇ ಸ್ಪರ್ಧಿಸುವಂತೆ ದುಂಬಾಲು

Last Updated : Dec 24, 2022, 8:05 PM IST

ABOUT THE AUTHOR

...view details