ಬಳ್ಳಾರಿ:ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಥಳೀಯ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದೆಂದು ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ. ಅಶ್ವತ್ಥ್ ನಾರಾಯಣ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡುತ್ತಾ, ಪಕ್ಷನಿಷ್ಠ ಕಾರ್ಯಕರ್ತರ ಸೇವೆ ಗಣನೆಗೆ ತೆಗೆದುಕೊಂಡು, ಅವರು ಮಾಡಿರೋ ಕೆಲಸ ಕಾರ್ಯ ಹಾಗೂ ಸಾಮರ್ಥ್ಯ, ಜವಾಬ್ದಾರಿಯನ್ನು ಅರಿತು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಕೋರ್‌ಕಮಿಟಿ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದರು.
ಜಿಲ್ಲೆ ವಿಭಜನೆ ಕುರಿತು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆನಂದ್ ಸಿಂಗ್, ಈಗ ಜಿಲ್ಲೆ ವಿಚಾರ ಮುಗಿದು ಹೋದ ಅಧ್ಯಾಯ. ಚಿಕ್ಕ ಜಿಲ್ಲೆಗಳಿಂದ ಅಭಿವೃದ್ಧಿಯ ವೇಗ ಹೆಚ್ಚುತ್ತೆ ಎಂದರು.
ಜಿ.ಸೊಮಶೇಖರ ರೆಡ್ಡಿ ಈ ವಿಚಾರವಾಗಿ ಏನೂ ಮಾತನಾಡಲಿಲ್ಲ. ಮಧ್ಯ ಪ್ರವೇಶಿಸಿದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಈ ಬಗ್ಗೆ ಇಬ್ಬರಲ್ಲಿ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಸದ ವೈ.ದೇವೆಂದ್ರಪ್ಪ, ಮಾಜಿ ಸಂಸದೆ ಜೆ.ಶಾಂತಾ, ಶಾಸಕ ಸೋಮಶೇಖರ ರೆಡ್ಡಿ, ಸಫಾಯಿ ಕರ್ಮಚಾರಿ ಆಭಿವೃದ್ಧಿ ನಿಗಮದ ಆಧ್ಯಕ್ಷ ಹನುಮಂತಪ್ಪ ಹಾಗು ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಇದ್ದರು.