ಬಳ್ಳಾರಿ:ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ವಿಜಯನಗರ ಜಿಲ್ಲೆ ಎಂದು ಹೇಳಿ ತಕ್ಷಣ ಕ್ಷಮೆಯಾಚಿಸಿದ ಪ್ರಸಂಗ ಜಿಲ್ಲೆಯ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಕಮಲಾಪುರದಲ್ಲಿ ನಡೆದಿದೆ.
ಬಿಜೆಪಿ ಅಭ್ಯರ್ಥಿಆನಂದ್ ಸಿಂಗ್.. ಉಪಚುನಾವಣೆ ಪ್ರಚಾರದ ವೇಳೆ ಬಿ ಎಸ್ ಯಡಿಯೂರಪ್ಪನವರು ವೇದಿಕೆ ಮೇಲಿದ್ದಾಗ ಈ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಬಿಎಸ್ವೈ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆಂದರು. ಬಿಎಸ್ವೈಗೆ ಇರುಸುಮುರುಸು ಆಗಬಾರದೆಂದು ತಕ್ಷಣ ಕ್ಷಮೆ ಕೇಳಿ ಈ ವಿಜಯನಗರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ಹದಿನಾಲ್ಕು ತಿಂಗಳ ವನವಾಸ ನನ್ನದು:ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗ 14 ತಿಂಗಳು ವನವಾಸಕ್ಕೆ ಹೋದ ಅನುಭವವಾಯಿತು. ಮೈತ್ರಿ ಸರ್ಕಾರದಲ್ಲಿ ಆರು ಕೋಟಿ ಜನರ ಜೀವನದ ಜೊತೆಗೆ ಚೆಲ್ಲಾಟ ನಡೆಸಿದ್ರು. ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಾಗಲಿ, ಕಾಂಗ್ರೆಸ್ ಮುಖಂಡರಿಗಾಗಲಿ ಜನರ ನಾಡಿಮಿಡಿತ ಗೊತ್ತಾಗಲಿಲ್ಲ. ಈ ಕಾರಣಕ್ಕಾಗಿ ನಾನು ಹದಿನಾಲ್ಕು ತಿಂಗಳು ವನವಾಸ ಅನುಭವಿಸಿದೆ ಎಂದರು.
ಆ ಹದಿನಾಲ್ಕು ತಿಂಗಳು ಇಡೀ ರಾಜ್ಯಕ್ಕೆ ಗ್ರಹಣ ಬಡಿದಿತ್ತು. ಅಭಿವೃದ್ಧಿ ಶೂನ್ಯ ಸಾಧನೆಯಾಗಿತ್ತು. ಅಂತಹ ಪಕ್ಷಕ್ಕೆ ಸೇರ್ಪಡೆ ಆಗಿದ್ದ ನನಗೆ ಒಂದು ರೀತಿಯ ಇರುಸುಮುರುಸು ಉಂಟಾಯಿತು. ಬಿಜೆಪಿ ತೊರೆಯಲಿಕ್ಕೆ ಕೆಲ ತಾಂತ್ರಿಕ ಕಾರಣ ಇದ್ದವು. ಹಾಗಾಗಿ ಪಕ್ಷ ತೊರೆದಿದ್ದೇ ಎಂದಿದ್ದಾರೆ.