ಬಳ್ಳಾರಿ:ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾನಾಯ್ಕ ಅವರ ದುಂಡಾವರ್ತನೆ ಖಂಡಿಸಿ ನ. 11ರಂದು ಹಗರಿ ಬೊಮ್ಮನಹಳ್ಳಿ ತಾಲೂಕು ಬಂದ್ಗೆ ಬಿಜೆಪಿ ಕರೆ ನೀಡಿದೆ.
ಈ ಸಂಬಂಧ ಮಾಜಿ ಶಾಸಕ ಕೆ. ನೇಮಿರಾಜ ನಾಯ್ಕ ಅವರು ಬಿಜೆಪಿಯ ಮುಖಂಡರೊಂದಿಗೆ ಸಭೆ ನಡೆಸಿದ್ದು, ಬಳಿಕ ಹಗರಿಬೊಮ್ಮನಹಳ್ಳಿ ತಾಲೂಕು ಬಂದ್ಗೆ ಕರೆ ನೀಡಿರುವ ಕುರಿತ ಮಾಹಿತಿ ಪ್ರಕಟಿಸಿದ್ರು. ಬಳಿಕ ಮಾತನಾಡಿದ ಅವರು, ಹಾಲಿ ಶಾಸಕ ಭೀಮಾನಾಯ್ಕ ಅವರ ಅಧಿಕಾರದ ದರ್ಪವನ್ನ ಖಂಡಿಸಿ ಈ ಬಂದ್ ಮಾಡಲಾಗುವುದು. ಬಂದ್ಗೆ ತಾಲೂಕಿನ ಎಲ್ಲಾ ಮಂಡಲ ಅಧ್ಯಕ್ಷರು, ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಈ ಬಂದ್ ಅನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.