ಹೊಸಪೇಟೆ/ಬಳ್ಳಾರಿ:ನಗರದಲ್ಲಿ ಇಂದು ಸಂಜೆ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಆನಂದ್ಸಿಂಗ್ ಪರವಾಗಿ ಮತ ಪ್ರಚಾರ ಮಾಡಲು ಬೈಕ್ ಜಾಥಾ ನಡೆಸಿದರು.
ಸುಮಾರು ಎರಡು ಸಾವಿರ ಬೈಕ್ಗಳೊಂದಿಗೆ ಬಿಜೆಪಿ ಕಾರ್ಯಕರ್ತರುರಾಲಿಯಲ್ಲಿ ಭಾಗವಹಿಸಿ ಆನಂದ್ಸಿಂಗ್ಗೆ ಬೆಂಬಲ ಸೂಚಿಸಿದ್ರು. ಆನಂದ್ ಸಿಂಗ್ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆಯನ್ನು ನೀಡಿದ್ದಾರೆ. ಅವರನ್ನು ಮೂರು ಬಾರಿ ಅಲ್ಲ, ಇನ್ನೂ ಮೂರು ಬಾರಿ ಗೆಲ್ಲಿಸುತ್ತೇವೆ. ಆನಂದ ಸಿಂಗ್ ಎಂದರೆ ಹೊಸಪೇಟೆ ಹೊಸಪೇಟೆ ಎಂದರೆ ಆನಂದ ಎಂದು ಅಭಿಮಾನಿಗಳು ಪ್ರಚಾರ ಮಾಡಿದರು.