ಬಳ್ಳಾರಿ: ಬಿರಿಯಾನಿ ಸರಿಯಾಗಿ ಕೊಟ್ಟಿಲ್ಲ ಎಂದು ಕಾಂಗ್ರೆಸ್ ಮುಖಂಡರು ದಾಂಧಲೆ ನಡೆಸಿ, ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂಧಿಸಿದ ಘಟನೆ ನಗರದ ರಾಯಲ್ ವೃತ್ತದ ಹೈದರಾಬಾದ್ ಬಿರಿಯಾನಿ ಸೆಂಟರ್ನಲ್ಲಿ ಸೆಪ್ಟೆಂಬರ್ 31ರಂದು ನಡೆದಿದೆ.
ಬಿರಿಯಾನಿಗಾಗಿ ಬೀದಿ ಜಗಳಕ್ಕೆ ನಿಂತ ಕಾಂಗ್ರೆಸ್ ಮುಖಂಡರು: ಸಾರ್ವಜನಿಕರ ಅಸಮಾಧಾನ - bellary latest news
ಬಳ್ಳಾರಿ ನಗರದ ಖಾಸಗಿ ಹೋಟೆಲ್ನಲ್ಲಿ ಬಿರಿಯಾನಿಯನ್ನು ಸರಿಯಾಗಿ ಕೊಟ್ಟಿಲ್ಲ ಎಂದು ಕಾಂಗ್ರೆಸ್ನ ಮುಖಂಡ ಬಿ.ಎಂ.ಪಾಟೀಲ ಹಾಗೂ ಮಾಜಿ ಉಪಮೇಯರ್ ಬಸವರಾಜ್ ಬೆಣಕಲ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿರಿಯಾನಿಗಾಗಿ ಬೀದಿ ಕಾರ್ಮಿಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್ ಮುಖಂಡರು
ಕಾಂಗ್ರೆಸ್ ಯುವ ಮುಖಂಡ ಬಿ.ಎಂ.ಪಾಟೀಲ ಸಹೋದರ ಮಾಜಿ ಉಪ ಮೇಯರ್ ಬಸವರಾಜ ಬೆಣಕಲ್ರಿಂದ ಹೋಟೆಲ್ ಸಿಬ್ಬಂದಿ ಮೇಲೆ ಗುಂಡಾವರ್ತನೆ ತೋರಿಸಿದ್ದಾರೆ ಎನ್ನಲಾಗಿದೆ.ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಕತಾಣದಲ್ಲಿ ವೈರಲ್ ಆಗಿದೆ.