ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಯರದಮನಹಳ್ಳಿ ಗ್ರಾಮದ ಗರ್ಭಿಣಿ ರಾಜಮ್ಮ ಎಂಬುವರು ನಿನ್ನೆ ರಾತ್ರಿ 108 ಆ್ಯಂಬುಲೆನ್ಸ್ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಯರದಮ್ಮನಹಳ್ಳಿ ಗ್ರಾಮದಲ್ಲಿದ್ದ ಅವರಿಗೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, 108 ಅನ್ನು ಸಂಪರ್ಕಿಸಿದ್ದಾರೆ. ನೆರವಿಗೆ ಆಗಮಿಸಿದ ಚೋರನೂರು108 ಸಿಬ್ಬಂದಿ ಗರ್ಭಿಣಿ ರಾಜಮ್ಮಳನ್ನು ಚೋರನೂರು ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಬೊಮ್ಮಘಟ್ಟ ಶ್ರೀಹುಲಿಕುಂಟೇಶ್ವರ ದೇವಸ್ಥಾನದ ಹತ್ತಿರದ ಕೆರೆ ಏರಿಯ ಮೇಲೆ 108 ಆ್ಯಂಬುಲೆನ್ಸ್ ಚಲಿಸುವಾಗ ವಾಹನದಲ್ಲಿಯೇ ಸುಲಭ ಹೆರಿಗೆಯಾಗಿದೆ.