ಬಳ್ಳಾರಿ:ಹೂವಿನಹಡಗಲಿ ಪಟ್ಟಣದಲ್ಲಿಂದು ಕಬ್ಬಿನ ಟ್ರ್ಯಾಕ್ಟರೊಂದು ಮುಂದೆ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು, ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಅಪಘಾತದಲ್ಲಿ ಮಗು ಸಾವು: ರೊಚ್ಚಿಗೆದ್ದ ಸಾರ್ವಜನಿಕರಿಂದ ಟ್ರ್ಯಾಕ್ಟರ್ಗೆ ಬೆಂಕಿ..
ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿಂದು ಕಬ್ಬಿನ ಟ್ರ್ಯಾಕ್ಟರೊಂದು ಮುಂದೆ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿಗಳಿಬ್ಬರು ಗಂಭೀರ ಗಾಯಗೊಂಡು, ಬಾಲಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ನಿರಂಜನ (6) ಮೃತ ಬಾಲಕ. ಬಾಲಕನ ಪೋಷಕರಾದಹಡಗಲಿ ಪಟ್ಟಣದ ನಿವಾಸಿ ಅರವಿಂದ, ಪತ್ನಿ ಶ್ವೇತಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೂವಿನಹಡಗಲಿ ಮೈಲಾರ ಶುಗರ್ಸ್ ಕಂಪನಿಗೆ ಕಬ್ಬನ್ನು ಕೊಂಡೊಯ್ಯುತ್ತಿದ್ದ ಟ್ರಾಕ್ಟರ್ ಬೈಕ್ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಘಟನೆಯನ್ನು ಕಣ್ಣಾರೆ ಕಂಡ ಸಾರ್ವಜನಿಕರು ರೊಚ್ಚಿಗೆದ್ದು ಕಬ್ಬು ದಾಸ್ತಾನಿನ ಟ್ರ್ಯಾಕ್ಟರ್ಗೆ ಬೆಂಕಿ ಹಾಕಿ ಸುಟ್ಟಿದ್ದಾರೆ. ಆ ಬೆಂಕಿಯನ್ನು ನಂದಿಸಲು ಬಂದಿರುವ ಅಗ್ನಿಶಾಮಕ ದಳದ ಸಿಬ್ಬಂದಿಗೂ ಅನುವು ಮಾಡಿ ಕೊಡದೇ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದುಸ್ಥಳಕ್ಕಾಗಮಿಸಿದ ಹೂವಿನಹಡಗಲಿ ಪೊಲೀಸರಿಗೂ, ಸಾರ್ವಜನಿಕರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ಅದು ವಿಕೋಪಕ್ಕೆ ತಿರುಗಿ ಗಲಾಟೆ ಏರ್ಪಟ್ಟಿತು. ಈ ವೇಳೆ ಹೂವಿನ ಹಡಗಲಿ ಪಿಎಸ್ಐ ಸೇರಿದಂತೆ ಅನೇಕರಿಗೆ ಸಣ್ಣಪುಟ್ಟ ಗಾಯ ಗಳಾಗಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ.