ಬಳ್ಳಾರಿ: ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಡತಿನಿ ಗ್ರಾಮದ ಬಳಿ ನಡೆದಿದೆ. ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ವಿರೂಪಣ್ಣ (31) ಸಾವಿಗೀಡಾಗಿದ್ದಾರೆ.
ಲಾರಿ-ಬೈಕ್ ಅಪಘಾತ: ಟ್ರಾಫಿಕ್ ಪೊಲೀಸ್ ಸಾವು - bike lorry accident in bellary
ವರ್ಗಾವಣೆಗೊಂಡು ಕಾರ್ಯಸ್ಥಾನಕ್ಕೆ ತೆರಳುತ್ತಿದ್ದ ಟ್ರಾಫಿಕ್ ಪೊಲೀಸ್‌ಗೆ ಬಳ್ಳಾರಿ ಜಿಲ್ಲೆಯ ಕುಡುತಿನಿ ಹೊರವಲಯದಲ್ಲಿ ಲಾರಿಯೊಂದು ಡಿಕ್ಕಿ ಹೊಡೆದಿದೆ.
ಲಾರಿ - ಬೈಕ್ ಅಪಘಾತ : ಟ್ರಾಫಿಕ್ ಪೊಲೀಸ್ ಸಾವು
ಬಳ್ಳಾರಿ ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದ ಇವರನ್ನು ಇತ್ತೀಚೆಗೆ ಕಂಪ್ಲಿಗೆ ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ ಕಂಪ್ಲಿಗೆ ಹೊರಟಿದ್ದಾಗ ಕುಡತಿನಿ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಧ್ರಪ್ರದೇಶಕ್ಕೆ ಹೋಗುತ್ತಿದ್ದ ಲಾರಿ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಿರೂಪಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕನನ್ನು ಕುಡತಿನಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಕಾರ್ಮಿಕ ಮುಖಂಡನಿಗೆ ಛೀಮಾರಿ ಹಾಕಿದ ಕಲಬುರಗಿ ಜಿಲ್ಲಾಧಿಕಾರಿ: ಏಕೆ ಗೊತ್ತೇ?