ಕರ್ನಾಟಕ

karnataka

ETV Bharat / state

ಕಾರು - ಬೈಕ್ ನಡುವೆ ಡಿಕ್ಕಿ.. ಸವಾರ ಸ್ಥಳದಲ್ಲೇ ದುರ್ಮರಣ

ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಸವಾರ ಮೃತಪಟ್ಟಿರುವ ಘಟನೆ ಸಿರಗುಪ್ಪದ ಬಳಿ ನಡೆದಿದೆ. ಘಟನೆ ನಂತರ ಎಸ್ಕೇಪ್ ಆಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

one death
ಸವಾರ ಸ್ಥಳದಲ್ಲೇ ದುರ್ಮರಣ

By

Published : Nov 6, 2020, 5:40 PM IST

ಬಳ್ಳಾರಿ: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿರಗುಪ್ಪ ತಾಲೂಕಿನ ಇಬ್ರಾಂಪುರದ ಹೆದ್ದಾರಿ 150/ಎ ನಲ್ಲಿ ನಡೆದಿದೆ.

ಕಾರು - ಬೈಕ್ ನಡುವೆ ಡಿಕ್ಕಿ.. ಓರ್ವ ದುರ್ಮರಣ

ಬಂಡ್ರಾಳು ಗ್ರಾಮದ ನಿವಾಸಿ ಸಿದ್ದನಗೌಡ (55) ಮೃತ ದುರ್ದೈವಿಯಾಗಿದ್ದಾನೆ. ಅಪಘಾತ ಸಂಭವಿಸುತ್ತಿದ್ದಂತೆ, ಕಾರು ಚಾಲಕ ಪರಾರಿಯಾಗಿದ್ದಾನೆ. ರಸ್ತೆ ಬದಿಯಲ್ಲಿದ್ದ ಜನರು, ಕೂಡಲೇ ಸ್ಥಳಕ್ಕೆ ಬಂದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜನರಿಂದ ಮಾಹಿತಿ ಪಡೆದು, ಆರೋಪಿ ಬಸವರಾಜ್​ನನ್ನು ಬಂಧಿಸಿದ್ದಾರೆ.

ABOUT THE AUTHOR

...view details