ಹೊಸಪೇಟೆ:ತಾಲೂಕಿನ ಪಾಪಿನಾಯಕಹಳ್ಳಿಯ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಬೈಕ್ ಸವಾರ ಲಾರಿ ಚಕ್ರದೊಳಗೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ಹೊಸಪೇಟೆ: ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವು - bike accedent news
ಹೊಸಪೇಟೆ ತಾಲೂಕಿನ ಪಾಪಿನಾಯಕಹಳ್ಳಿಯ ರಾಷ್ಟ್ರೀಯ ಹೆದ್ದಾರಿ 63ರ ಬಳಿ ಬೈಕ್ ಸವಾರ ಲಾರಿ ಗಾಲಿಗೆ ಸಿಲುಕಿ ಜೀವಕಳೆದುಕೊಂಡಿದ್ದಾನೆ.
ಅಪಘಾತ
ಹೊಸಪೇಟೆ ನಗರ ನಿವಾಸಿ ಹಾಗೂ ಜಿಂದಾಲ್ ನೌಕರ ಆಂಜನೇಯ(30) ಮೃತ ಬೈಕ್ ಸವಾರ. ಈತ ಎಂದಿನಂತೆ ಜಿಂದಾಲ್ ಕಾರ್ಖಾನೆಗೆ ಕೆಲಸಕ್ಕೆ ತೆರಳುವ ವೇಳೆ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಗಾದಿಗನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.