ಕರ್ನಾಟಕ

karnataka

ETV Bharat / state

ರಸ್ತೆ ಪಕ್ಕದ ಸೇತುವೆಗೆ ಬೈಕ್​ ಡಿಕ್ಕಿ.. ಸವಾರ ಸಾವು, ಹಿಂಬದಿ ಕುಳಿತಿದ್ದವನ ಸ್ಥಿತಿ ಗಂಭೀರ! - ವಿಜಯನಗರ ಅಪಘಾತ ಸುದ್ದಿ

ರಸ್ತೆ ಪಕ್ಕದ ಸೇತುವೆ ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.

bike accident in Bellary, Bellary accident news, man died in accident at Bellary, ಬಳ್ಳಾರಿ ಬೈಕ್​ ಅಪಘಾತ, ಬಳ್ಳಾರಿ ಅಪಘಾತ ಸುದ್ದಿ, ಬಳ್ಳಾರಿ ಅಪಘಾತದಲ್ಲಿ ಬೈಕ್​ ಸವಾರ ಸಾವು,
ಬೈಕ್​ ಅಪಘಾತ

By

Published : Jun 20, 2022, 2:17 PM IST

ವಿಜಯನಗರ: ರಸ್ತೆ ಪಕ್ಕದ ಸೇತುವೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯರ ಗುಂಡ್ಲಹಟ್ಟಿ ಹೊರವಲಯದಲ್ಲಿ ಭಾನುವಾರ ಸಂಜೆ ನಡೆದಿದೆ.

ಚಿತ್ರ ದುರ್ಗ ಜಿಲ್ಲೆ ಮೊಳಕಾಲೂರು ತಾಲೂಕಿನ ನಾಗಸಮುದ್ರ ಗ್ರಾಮದ ನಾಗರಾಜ (48) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಕನ್ನಯ್ಯ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಕೂಡ್ಲಿಗಿ ತಾಲೂಕಿನ ಗ್ರಾಮವೊಂದರಲ್ಲಿ ಸಂಬಂಧಿಕರ ಮನೆಗೆ ಬಂದಿದ್ದು, ಸಂಜೆ ವಾಪಸ್ ಸ್ವ ಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಮೃತನ ಸಂಬಂಧಿ ವೆಂಕಟೇಶ್ ನೀಡಿದ ದೂರಿನ ಅನ್ವಯ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಶಾಂತಮೂರ್ತಿ ಭೇಟಿ ನೀಡಿ ಪರಿಶೀಲಿಸಿದ್ದರು.

ABOUT THE AUTHOR

...view details