ಬಳ್ಳಾರಿ: ವಿಮ್ಸ್ನ ಪ್ರಕರಣಕ್ಕೆ ಇಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಆಡಳಿತ ಪಕ್ಷದ ಶಾಸಕರೇ ಈಗ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಸಚಿವ ಡಾ ಸುಧಾಕರ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡೈರೆಕ್ಟರ್ ಗಂಗಾಧರ ಗೌಡ, ನನ್ನ ವಿರುದ್ಧ ಕೆಲವರು ಷಡ್ಯಂತ್ರ ಮಾಡಿದ್ದಾರೆ. ಸೂಕ್ತ ಸಮಯದಲ್ಲಿ ಅವರ ವಿರುದ್ಧ ಕೇಸ್ ಮಾಡುವೆ ಎಂದಿದ್ದಾರೆ. ಇನ್ನು ವಿರೋಧ ಪಕ್ಷದ ಶಾಸಕ ನಾಗೇಂದ್ರ ಡೈರೆಕ್ಟರ್ಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಶಾಸಕ ಜಿ.ಸೋಮಶೇಖರ ರೆಡ್ಡಿ, ಸಚಿವ ಡಾ. ಸುಧಾಕರ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವಿಮ್ಸ್ ನಿರ್ದೇಶಕರನ್ನಾಗಿ ಡಾ ಗಂಗಾಧರ ಗೌಡ ಅವರನ್ನು ನೇಮಿಸಬೇಡಿ ಅಂತ ಮೊದಲೇ ತಿಳಿಸಿದ್ದೆ. ಆದರೆ, ಡಾ ಸುಧಾಕರ್ ನಮ್ಮ ಮಾತನ್ನು ಕೇಳದೇ ಗಂಗಾಧರ ಗೌಡ ಅವರನ್ನು ವಿಮ್ಸ್ ಡೈರೆಕ್ಟರ್ ಆಗಿ ನೇಮಿಸಿದ್ದರು. ಇದೀಗ ಈ ಎಲ್ಲ ಎಡವಟ್ಟುಗಳಿಗೆ ಕಾರಣವಾಗಿದೆ ಎಂದು ಆರೋಪ ಮಾಡಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ ಪಕ್ಷದ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಇಂದು ಪ್ರತಿಭಟನೆ ನಡೆಸಿ, ಡಿಸಿ ಅವರಿಗೆ ಮನವಿ ಸಲ್ಲಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಅವಿವೇಕಿಗಳು, ಬಿಜೆಪಿ ಕೊಲೆ ಗಡುಕ ಸರ್ಕಾರ ಎಂದು ಶಾಸಕರು ಜರಿದರು. ಕೂಡಲೇ ಮುಖ್ಯಮಂತ್ರಿಗಳು, ವೈದ್ಯಕೀಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ನಂತರ ವಿಮ್ಸ್ಗೆ ತೆರಳಿ ನಿರ್ದೇಶಕ ಗಂಗಾಧರ ಗೌಡ ಅವರಿಗೂ ಕ್ಲಾಸ್ ತೆಗೆದುಕೊಂಡರು. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.