ಕರ್ನಾಟಕ

karnataka

ETV Bharat / state

ಹೊಸಪೇಟೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭುವನೇಶ್ವರಿ‌ ಮೂರ್ತಿ ಪ್ರತಿಷ್ಠಾಪಣೆ - STATUE ON NATIONAL HIGHWAY

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಾಗಿತ್ತು. ಇದರ ಅಧಿಪತಿಯಾಗಿರುವ ವಿರೂಪಾಕ್ಷೇಶ್ವರ ಎಡಭಾಗದಲ್ಲಿ ಭುವನೇಶ್ವರಿ ದೇವಿಯ ದೇವಸ್ಥಾನವಿದೆ. ವಿಜಯನಗರ ಕಾಲದಲ್ಲೂ ಭುವನೇಶ್ವರಿ ದೇವಿಗೆ ಪ್ರಾಧಾನ್ಯತೆಯನ್ನು ನೀಡಲಾಗಿತ್ತು ಎಂಬುದು ತಿಳಿದು ಬರುತ್ತದೆ. ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯಲ್ಲಿ ಭುವನೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಗುತ್ತಿದೆ.‌

ಪ್ರತಿಷ್ಠಾಪಣೆ
ಪ್ರತಿಷ್ಠಾಪಣೆ

By

Published : Mar 3, 2021, 12:46 PM IST

ಹೊಸಪೇಟೆ:ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನ ಹೊಸಪೇಟೆಗೆ ಆಗಮಿಸುವ ಮುನ್ನ ತಾಯಿ ಭುವನೇಶ್ವರಿ ಎಲ್ಲರಿಗೂ ಸ್ವಾಗತ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಈ ಕಾರ್ಯ ಸದ್ದಿಲ್ಲದೆ ರಾಷ್ಟ್ರೀಯ ಹೆದ್ದಾರಿ-50ರ ಸುರಂಗ ಮಾರ್ಗ(ಟನಲ್)ದಲ್ಲಿ ನಡೆಯುತ್ತಿದೆ.

ನಗರದ ಹೊರ ವಲಯದ ಬೈಪಾಸ್ ರಸ್ತೆಯಲ್ಲಿ ಈ ಟನಲ್ ಬರುತ್ತಿದ್ದು, ಗುಡ್ಡವನ್ನು ಕೊರೆದು ಟನಲ್ ನಿರ್ಮಿಸಲಾಗಿದೆ. ಇಲ್ಲಿ ಭುವನೇಶ್ವರಿ ದೇವಿ ಮೂರ್ತಿಯನ್ನು ಐದು ಕೋಟಿ ರೂ. ವೆಚ್ಚದಲ್ಲಿ ಪ್ರತಿಷ್ಠಾಪಿಸಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ಆನಂದ್​ ಸಿಂಗ್ ಮುಂದಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭುವನೇಶ್ವರಿ‌ ಮೂರ್ತಿ ಪ್ರತಿಷ್ಠಾಪಣೆ

ಎಲ್ಲಿ ಮೂರ್ತಿ ಪ್ರತಿಷ್ಠಾಪಣೆ?:ಎರಡು ಕಡೆ ಟನಲ್ ಮಾರ್ಗ ಹೋಗುತ್ತದೆ. ಮರಿಯಮ್ಮಹಳ್ಳಿ ಕಡೆಯಿಂದ ಹೊಸಪೇಟೆಗೆ ಬರುವ ಸಂದರ್ಭದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಎರಡು ಸುರಂಗ ಮಧ್ಯೆ ಸ್ಥಳವಿದೆ. ಅಲ್ಲಿ ಭುವನೇಶ್ವರಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಉದ್ದೇಶಲಾಗಿದೆ.

ವಿಜಯನಗರ ಶೈಲಿಗೆ ಆದ್ಯತೆ:ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಾಗಿತ್ತು. ಇದರ ಅಧಿಪತಿಯಾಗಿರುವ ವಿರೂಪಾಕ್ಷೇಶ್ವರ ಎಡಭಾಗದಲ್ಲಿ ಭುವನೇಶ್ವರಿ ದೇವಿಯ ದೇವಸ್ಥಾನವಿದೆ. ವಿಜಯನಗರ ಕಾಲದಲ್ಲೂ ಭುವನೇಶ್ವರಿ ದೇವಿಗೆ ಪ್ರಾಧಾನ್ಯತೆಯನ್ನು ನೀಡಲಾಗಿತ್ತು ಎಂಬುದು ತಿಳಿದು ಬರುತ್ತದೆ. ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆಯಲ್ಲಿ ಭುವನೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪಣೆ ಮಾಡಲಾಗುತ್ತಿದೆ.‌

ಇದನ್ನೂ ಓದಿ..ಅಂದು ಹಾಲಪ್ಪ, ಈಗ ಜಾರಕಿಹೊಳಿ: ರಾಸಲೀಲೆ ವಿಡಿಯೋದಿಂದ ಬಿಎಸ್‌ವೈ ಸರ್ಕಾರಕ್ಕೆ ಮುಜುಗರ

ಸುರಂಗ ಮಾರ್ಗಕ್ಕೆ ಕಳೆ:ಲೈಟ್ ಬೆಳಕು ಹಾಗೂ ವಾಹನಗಳ ಬೆಳಕು ನಿಖರವಾಗಿ ಬೀಳಲಿ‌ ಎಂದು ಟನಲ್ ಒಳಗಡೆ ಬಿಳಿ ಬಣ್ಣ ಬಳೆಯಲಾಗುತ್ತಿದೆ. ಈ ಮುಂಚೆ ಬಣ್ಣವನ್ನು ಹಾಗೇ ಬಿಡಲಾಗಿತ್ತು. ಇದರಿಂದ ಬೆಳಕು ಅಷ್ಟೊಂದು ನಿಖರವಾಗಿ ಬೀಳುತ್ತಿರಲಿಲ್ಲ.

ಬೈಪಾಸ್ ಅಭಿವೃದ್ಧಿ:ಟನಲ್ ಬಳಿ ಗಿಡಗಂಟಿಗಳಿಂದ ಒಂದು ಸ್ಥಳ ನಿರಪಯುಕ್ತವಾಗಿತ್ತು.‌ ಅದನ್ನು ಈಗ ಸ್ವಚ್ಛತೆ ಮಾಡಲಾಗುತ್ತಿದೆ. ಅಲ್ಲಿ ಉದ್ಯಾನ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ತೀರ್ಮಾನ ಮಾಡಲಾಗಿದೆ. ಇದರಿಂದ ಜನರಿಗೆ ವಿಶ್ರಾಂತಿ ತಗೆದುಕೊಳ್ಳಲು ಅನಕೂಲವಾಗಲಿದೆ.

ABOUT THE AUTHOR

...view details