ಬಳ್ಳಾರಿ: ಅಧಿಕಾರಿಗಳು ಅಂದ್ರೆ ಐಷಾರಾಮಿ ಬದುಕು ಅವರದು ಎಂಬುದು ಎಲ್ಲರಲ್ಲಿರುವ ಅಭಿಪ್ರಾಯ. ಆದರೆ, ಇಲ್ಲೋರ್ವ ಅಧಿಕಾರಿ ತಮ್ಮ ಮಗುವಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಜನ್ಮ ನೀಡಿ ಮಾದರಿಯಾಗಿದ್ದಾರೆ.
ಬಳ್ಳಾರಿ ಜಿಪಂ ಸಿಇಒ ನಂದಿನಿ. ಕೆ.ಆರ್ ಅವರು ಬುಧವಾರ ರಾತ್ರಿ 11:30 ಸುಮಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಸಹಜ ಹೆರಿಗೆ ಆಗಿದ್ದು, ತಾಯಿ ಮತ್ತು ನವಜಾತ ಶಿಶು ಆರೋಗ್ಯವಾಗಿದ್ದಾರೆ.
ಇದನ್ನೂ ಓದಿ:ಪಾಕ್ನಲ್ಲಿ ಕಚ್ಚಾ ತೈಲ ಅವ್ಯವಹಾರ ಪ್ರಕರಣ: ನಿವೃತ್ತ ಜನರಲ್ ವಿರುದ್ಧ ಎನ್ಎಬಿ ತನಿಖೆ
ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ವಿರೇಂದ್ರ ಕುಮಾರ್ ತಂಡ ಸಿಇಒ ನಂದಿನಿ ಅವರಿಗೆ ಹೆರಿಗೆ ಮಾಡಿಸಿದೆ. ಈ ಹಿಂದೆ ಹಿರಿಯ ಅಧಿಕಾರಿಗಳಾದ ಎಸ್.ಎಸ್. ನಕುಲ್ ಅವರ ಪತ್ನಿ ಹಾಗೂ ರಾಜೇಂದ್ರ ಅವರ ಪತ್ನಿ, ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಬಿರಾದರ್ ಮಗಳು ಸೇರದಂತೆ ಹಲವರು ತಮ್ಮ ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲೇ ಜನ್ಮ ನೀಡಿದ್ದನ್ನು ಸ್ಮರಿಸಬಹುದು.