ಬಳ್ಳಾರಿ:ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ನರೇಗಾ ಕಾಮಗಾರಿಗಳಲ್ಲಿ ಕೂಲಿಕಾರ್ಮಿಕರು ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯಕ್ಕೆ ಆಸ್ತಿಯಾಗುವಂತ ಕಾರ್ಯಕ್ರಮಗಳನ್ನು ಇದರಡಿ ಕೈಗೆತ್ತಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬಳ್ಳಾರಿಯ ಸರ್ಕಾರಿ ಅತಿಥಿ ಗೃಹ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯೊಂದರಲ್ಲಿಯೇ ಒಂದೇ ದಿನ 1.33 ಲಕ್ಷ ಕೂಲಿಕಾರ್ಮಿಕರು ನರೇಗಾ ಅಡಿ ಕೆಲಸ ಮಾಡಿದ್ದಾರೆ. ಅಂತರ್ಜಲ ಜಾಸ್ತಿ ಮಾಡುವ ನಿಟ್ಟಿನಲ್ಲಿ ಅಂತರ್ಜಲ ಚೇತನ, ಬದುನಿರ್ಮಾಣ, ಇಂಗುಗುಂಡಿ ನಿರ್ಮಾಣ, ಕೃಷಿಹೊಂಡ, ಕೊಳವೆಬಾವಿ ಮತ್ತು ಬಾವಿಗಳ ರಿಚಾರ್ಜ್ ಮಾಡುವುದು ಸೇರಿದಂತೆ ವಿವಿಧ ಆಸ್ತಿಯಾಗುವಂತ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತರಿಗೆ 2 ಲಕ್ಷ ರೂ. ವೈಯಕ್ತಿಕವಾಗಿ ರೈತರ ಬದುಕಿಗೆ ಲಾಭ ಕೊಡುವಂತ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.