ಕರ್ನಾಟಕ

karnataka

ETV Bharat / state

ಬಳ್ಳಾರಿ: ಕೊರೊನಾ ಸೋಂಕಿತನಿಂದ ಕೋವಿಡ್​ ರೋಗಿಗಳಿಗೆ ಆಸ್ಪತ್ರೆಯಲ್ಲಿ ಯೋಗಾಭ್ಯಾಸ!

ಬಳ್ಳಾರಿಯ ವಿಮ್ಸ್ ಸರ್ಕಾರಿ ದಂತ ಮಹಾವಿದ್ಯಾಲಯಕ್ಕೆ ಕೊರೊನಾ ಚಿಕಿತ್ಸೆಗೆ ದಾಖಲಾಗಿರುವ ಕಂಪ್ಲಿ ಪುರಸಭೆಯ ಸದಸ್ಯ ಚಾಂದ್​ ಪಾಶಾ ಅವರು, ಇತರ ಸೋಂಕಿತರಿಗೆ ಯೋಗಾಸನ ಹೇಳಿಕೊಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

ಕಂಪ್ಲಿ ಪುರಸಭೆಯ ಸದಸ್ಯ ಚಾಂದಪಾಶಾ
ಕಂಪ್ಲಿ ಪುರಸಭೆಯ ಸದಸ್ಯ ಚಾಂದಪಾಶಾ

By

Published : Jul 16, 2020, 5:56 PM IST

Updated : Jul 16, 2020, 8:02 PM IST

ಬಳ್ಳಾರಿ: ಕೊರೊನಾ ಚಿಕಿತ್ಸೆಗಾಗಿ ಜಿಲ್ಲೆಯ ವಿಮ್ಸ್ ಸರ್ಕಾರಿ ದಂತ ಮಹಾವಿದ್ಯಾಲಯಕ್ಕೆ ಕಳೆದ 8 ದಿನಗಳ ಹಿಂದೆ ದಾಖಲಾಗಿರುವ ಕಂಪ್ಲಿ ಪುರಸಭೆಯ ಸದಸ್ಯ ಚಾಂದ್​ಪಾಶಾ ಅವರು, ಸೋಂಕಿತರಿಗೆ ಯೋಗಾಸನ ಹೇಳಿಕೊಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ

ಸೋಂಕು ಹೊಡೆದೋಡಿಸಲು ಆತ್ಮಸ್ಥೈರ್ಯವೇ ಮುಖ್ಯ. ನೊಂದುಕೊಂಡು ಕೊರೊನಾ ಚಿಕಿತ್ಸೆಗೆ ಬರಬೇಡಿ. ಇದೊಂದು ಪಿಕ್‍ನಿಕ್ ಎಂದುಕೊಂಡು ಬನ್ನಿ. ಏನು ಆಗಲ್ಲ, ಬಿ ಹ್ಯಾಪಿ ಎಂದು ಹೊಸದಾಗಿ ಬರುವ ಸೋಂಕಿತರಿಗೆ ಮತ್ತು ಊಟ-ನೀರು ಸೇವಿಸದೇ ಮುಂದೇನು ನಮ್ಮಗತಿ ಎಂದು ಚಿಂತಿಸುವವರ ಎದುರು ಚಾಂದ್​ಪಾಶಾ ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.

ಸೋಂಕಿತನಿಂದ ಇತರ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಯೋಗಾಬ್ಯಾಸ

ಇದರ ಜೊತೆಗೆ ತಮ್ಮದೇ ಖರ್ಚಿನಲ್ಲಿ ಕಷಾಯಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸಿ, ತಮ್ಮ ಕೈಯಾರೆ ಪ್ರತಿನಿತ್ಯ ಕಷಾಯ ಸಿದ್ಧಪಡಿಸಿ 50 ಜನರಿಗೆ ಕುಡಿಸುತ್ತಿದ್ದಾರೆ.

ಸೋಂಕಿತನಿಂದ ಇತರ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಯೋಗಾಬ್ಯಾಸ

ನಿಜಕ್ಕೂ ಈ ವ್ಯಕ್ತಿ ನಮಗೆಲ್ಲೆರಿಗೂ ಸ್ಫೂರ್ತಿ ಎಂದು ವಿಮ್ಸ್ ಸರ್ಕಾರಿ ದಂತ ಮಹಾವಿದ್ಯಾಲಯದ ಕೋವಿಡ್ ನೋಡಲ್ ಅಧಿಕಾರಿ ಡಾ. ರಾಘವೇಂದ್ರ ಅವರು ಹೇಳುತ್ತಾರೆ.

ಪುರಸಭೆಯ ಸದಸ್ಯ ಚಾಂದಪಾಶಾರಿಂದ ಸೋಂಕಿತರಿಗೆ ಯೋಗಾಭ್ಯಾಸ

ಚಾಂದ್​ಪಾಶಾ ಅವರು ವಿವಿಧ ಯೋಗಾಸನದ ಭಂಗಿಗಳ ವಿಡಿಯೋ ಗಮನಿಸಿದೆ ಹಾಗೂ ಅವರಾಡುವ ಸ್ಫೂರ್ತಿದಾಯಕ ಮಾತುಗಳನ್ನ ಆಲಿಸಿದೆ. ಇದರಿಂದ ತುಂಬಾ ಸಂತೋಷವಾಯ್ತು ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್​ ಮೆಚ್ಚುಗೆ ವ್ಯಕ್ತಪಡಿಸಿದರು.

Last Updated : Jul 16, 2020, 8:02 PM IST

ABOUT THE AUTHOR

...view details