ಗಂಗಾವತಿ:ಸೆ. 20 ಭಾನುವಾರ ನಡೆಯಬೇಕಿದ್ದ ಪದವಿ ಹಂತದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿ ಸಿದ್ದು ಅಲ್ಗೂರು ಆದೇಶಿಸಿದ್ದಾರೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆ - Bellary VV degree exam Postpone
ಪದವಿ ಹಂತದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಉಪಕುಲಪತಿ ಸಿದ್ದು ಅಲ್ಗೂರು ಆದೇಶಿಸಿದ್ದಾರೆ.
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ
ಸೆ. 20ರಂದು ಕರ್ನಾಟಕ ಲೋಕಸೇವಾ ಆಯೋಗದಿಂದ ಪೊಲೀಸ್ ಇಲಾಖೆಯ ಪೊಲೀಸ್ ಪೇದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆ ಇದೆ. ಇದೇ ದಿನ ಬಳ್ಳಾರಿ ವಿವಿಯಿಂದಲೂ ಪದವಿ ಹಂತದ ವಿವಿಧ ತರಗತಿಗಳಿಗೆ ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು. ಅಂತೆಯೇ ಸೆ. 27ರಂದು ಕೇಂದ್ರ ಸರ್ಕಾರದ ನೆಟ್ ಪರೀಕ್ಷೆ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಇರುವ ಕಾರಣಕ್ಕೆ ಸೆ. 20ರ ಪರೀಕ್ಷೆಯನ್ನು ಅಕ್ಟೋಬರ್ 8ಕ್ಕೆ ಹಾಗೂ ಸೆ. 27ರ ಪರೀಕ್ಷೆಯನ್ನು ಅ. 9ಕ್ಕೆ ಮುಂದೂಡಲಾಗಿದೆ.