ಕರ್ನಾಟಕ

karnataka

ETV Bharat / state

ವೇತನ ಇಲ್ಲದೆ ಪರಿತಪಿಸುವ ಸ್ಥಿತಿ ಬಂದಿದೆ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ಕಣ್ಣೀರಿಟ್ಟ ಶುಶ್ರೂಷಕ

ನಿನ್ನೆ ದಿನ ಶುಶ್ರೂಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರದ ಮೂಲಕ ವಿಮ್ಸ್‌ ನಿರ್ದೇಶಕ ಡಾ. ‌ದೇವಾನಂದ ಅವರ ಬಳಿಗೆ ಹೋದೆವು. ಆದರೆ, ಅವರು ನಮ್ಮನ್ನು ನಿರ್ಲಕ್ಷ್ಯ ಮಾಡಿದರು. ನಮ್ಮ ಮನವಿಯನ್ನು ಶೈಲೆಂದ್ರ ಅವರ ಬಳಿ‌ ಕೊಟ್ಟು 'ಅವರನ್ನೆಲ್ಲಾ ಕೆಲಸದಿಂದ ತೆಗೆದುಹಾಕು'ವಂತೆ ಆದೇಶ ಹೊರಡಿಸಿದ್ದಾರೆ ಎಂದು ವಿಮ್ಸ್ ಶುಶ್ರೂಷಕ​ ಕರಿಬಸವಪ್ಪ ದೂರಿದರು.

bellary vims
ವೇತನವಿಲ್ಲದೇ ನರಳುವ ಪರಿಸ್ಥಿತಿ ಉಂಟಾಗಿದೆ: ಕಣ್ಣಿರಿಟ್ಟ ಶುಶ್ರೂಷಕ

By

Published : Jul 7, 2020, 10:53 PM IST

ಬಳ್ಳಾರಿ: ವೇತನ ಇಲ್ಲದೆ ಹೆಂಡತಿ, ಮಕ್ಕಳನ್ನು ದೂರ ಮಾಡಿಕೊಂಡು ಶುಶ್ರೂಷಕರಾಗಿ ಕೆಲಸ ಮಾಡುತ್ತಾ ನರಳುವ ಪರಿಸ್ಥಿತಿ ಬಂದಿದೆ ಎಂದು ಕಣ್ಣೀರು ಹಾಕುತ್ತಾ ಶುಶ್ರೂಷಕರೊಬ್ಬರು ಅಳಲು ತೋಡಿಕೊಂಡರು.

ಮಾಧ್ಯಮಗಳ ಜತೆ ಮಾತನಾಡಿದ ವಿಮ್ಸ್​ ಶುಶ್ರೂಷಕ

ವಿಮ್ಸ್‌ನ ಒಳಗುತ್ತಿಗೆದಾರ ಕರಿಬಸವಪ್ಪ ಮಾತನಾಡಿ, ನಿನ್ನೆ ದಿನ ಶುಶ್ರೂಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರದ ಮೂಲಕ ವಿಮ್ಸ್‌ ನಿರ್ದೇಶಕ ಡಾ. ‌ದೇವಾನಂದ ಅವರ ಬಳಿಗೆ ಹೋದೆವು. ಆದರೆ, ಅವರು ನಮ್ಮನ್ನು ನಿರ್ಲಕ್ಷ್ಯ ಮಾಡಿದರು. ನಮ್ಮ ಮನವಿಯನ್ನು ಶೈಲೆಂದ್ರ ಅವರ ಬಳಿ‌ ಕೊಟ್ಟು 'ಅವರನ್ನೆಲ್ಲಾ ಕೆಲಸದಿಂದ ತೆಗೆದುಹಾಕು'ವಂತೆ ಆದೇಶ ಹೊರಡಿಸಿದ್ದಾರೆ ಎಂದು ದೂರಿದರು.

ಕಳೆದ ಆರು ತಿಂಗಳಿಂದ ವೇತನ ಇಲ್ಲ. ವೇತನದಲ್ಲಿ ತಾರತಮ್ಯ ಎಸಗಲಾಗುತ್ತಿದೆ. ನೇಮಕಾತಿ ಆದೇಶದಲ್ಲಿ ವೇತನ 20,000 ರೂ. ಇದೆ. ‌ಆದರೆ, 15,000 ರೂ. ಮಾತ್ರ ನೀಡುತ್ತಾರೆ. ಒಂದು ತಿಂಗಳು ಮಾತ್ರ ನೀಡಿದ್ದಾರೆ ಎಂದು ಆರೋಪಿಸಿದರು.

ಶುಶ್ರೂಷಕರಿಲ್ಲದೇ ಯಾವ ಅಧಿಕಾರಿಗಳೂ ಇಲ್ಲ. ವೈದ್ಯರು ಬಿಳಿ ಹಾಳೆಯಲ್ಲಿ ಬರೆದುಕೊಡಬಹುದು. ಆದರೆ, ರೋಗಿಗಳಿಗೆ ಚಿಕಿತ್ಸೆ ನೀಡುವವರು ನಾವು. ವಿಮ್ಸ್ ನಿರ್ದೇಶಕರ ಬಳಿ ಶುಶ್ರೂಷಕರು ಮಾತನಾಡಿದರೇ ಕೆಲಸದಿಂದ ತೆಗೆದುಹಾಕುವುದಾಗಿ ಹೇಳುತ್ತಾರೆ. ಸಂಬಳ‌ ನೀಡಲು ಯಾರೂ ಸಹ ಮುಂದೆ ಬರುವುದಿಲ್ಲ. ಬಳ್ಳಾರಿಯ ವಿಮ್ಸ್‌ನಲ್ಲಿ ಭ್ರಷ್ಟಾಚಾರ, ಹಗರಣ ತುಂಬಿ ತುಳುಕುತ್ತಿದೆ ಎಂದು ಆಪಾದಿಸಿದರು.

ಶುಶ್ರೂಷಕರ ಬೇಡಿಕೆಗಳು:

ನೇಮಕ ಆದೇಶ ಪ್ರತಿಯಂತೆ ಮಾಸಿಕ 20,000 ರೂ. ವೇತನ ನೀಡಬೇಕು. ಎಲ್ಲಾ ಶುಶ್ರೂಷಕ, ಶುಶ್ರೂಷಕಿಯರಿಗೆ ಕೊವೈಡ್ 19 ಜೀವನ ವಿಮೆ ಕಲ್ಪಿಸಬೇಕು. ಕೊರೊನಾ ಮುಂಜಾಗ್ರತಾ ವಸ್ತುಗಳಾದ ಮಾಸ್ಕ್, ಸ್ಯಾನಿಟೈಜರ್, ಪಿಪಿಇ ಕಿಟ್ ವಿತರಣೆ ಮಾಡಬೇಕು ಎಂಬುದು ಇವರ ಒತ್ತಾಯ.

ABOUT THE AUTHOR

...view details