ಕರ್ನಾಟಕ

karnataka

ETV Bharat / state

ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ಕಳುಹಿಸಿದ ಗ್ರಾಮಸ್ಥರು - Flood Effected People

ಬಳ್ಳಾರಿ ಜಿಲ್ಲೆಯ ನೆರೆ ಬಾಧಿತ ಗ್ರಾಮಸ್ಥರಿಗೆ ನೆರವಾಗಲು ಪಕ್ಕದ ಗ್ರಾಮಸ್ಥರು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ, ಕಳಿಸಿ ಮಾನವೀಯತೆ ಮೆರೆದಿದ್ದಾರೆ. ಸ್ವತಃ ಗ್ರಾಮಸ್ಥರೇ ಆಹಾರ ಸಾಮಗ್ರಿಗಳನ್ನು ಲಾರಿಯಲ್ಲಿ ತುಂಬಿ ನೆರೆ ಸಂತ್ರಸ್ತರಿಗೆ ಕಳಿಸುವ ಮೂಲಕ ಸಂಕಷ್ಟದಲ್ಲಿರುವ ಅಕ್ಕಪಕ್ಕದ ಗ್ರಾಮಸ್ಥರಿಗೆ ನೆರವಾಗಿದ್ದಾರೆ.

Bellary: Villagers sent food Items to Flood affected People

By

Published : Aug 19, 2019, 1:43 AM IST

ಬಳ್ಳಾರಿ: ನೆರೆ ಬಾಧಿತ ಗ್ರಾಮಗಳ ಸಂತ್ರಸ್ತರಿಗೆ ನೆರವಾಗಲು ಪಕ್ಕದ ಗ್ರಾಮಗಳ ಜನರು ಆಹಾರ ಸಾಮಾಗ್ರಿಗಳನ್ನು ಕಳಿಸಿಕೊಟ್ಟಂತಹ ಮಾನವೀಯ ಘಟನೆಗೆ ಜಿಲ್ಲೆ ಸಾಕ್ಷಿಯಾಯಿತು.

ಜಿಲ್ಲೆಯ ಶಿಡಿಗಿನಮೊಳ ಗ್ರಾಮದಿಂದ 130 ಮತ್ತು ಮಿನಳ್ಳಿಯಿಂದ 70 ಕ್ವಿಂಟಾಲ್ ಅಕ್ಕಿ ಮತ್ತು 7 ಕ್ವಿಂಟಾಲ್ ಬೇಳೆಯನ್ನು ಅಂಕೋಲಾದ ಸುತ್ತಮುತ್ತಲಿನ ಹಳ್ಳಿಯ ನೆರೆ ಸಂತ್ರಸ್ಥರಿಗೆ ಗ್ರಾಮದ ಜನರು ಕಳಿಸಿಕೊಟ್ಟಿದ್ದಾರೆ. ಸ್ವತಃ ಗ್ರಾಮಸ್ಥರೇ ಆಹಾರ ಸಾಮಾಗ್ರಿಗಳನ್ನು ಲಾರಿಯಲ್ಲಿ ತುಂಬಿ ನೆರೆ ಭಾದಿತ ಗ್ರಾಮಗಳಿಗೆ ಕಳಿಸಿಕೊಟ್ಟಿದ್ದು ವಿಶೇಷವಾಗಿತ್ತು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಧನಲಕ್ಷ್ಮಿ, ಅಂಬರೀಷ್, ಬಸವರಾಜ್, ಭೀಮಲಿಂಗ, ಚನ್ನಬಸವನ ಗೌಡ ಮತ್ತು ಶಿಡಿಗಿನ ಮೊಳ ಮತ್ತು ಮೀನಹಳ್ಳಿಯ ಸಾರ್ವಜನಿಕರು ಈ ಸಂದರ್ಭಧಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details