ಬಳ್ಳಾರಿ: 2020-21 ಸಾಲಿನ 134.72 ಕೋಟಿ ರೂಪಾಯಿ ಮೊತ್ತದ ಬಜೆಟ್ ಅನ್ನು ಮಂಡನೆ ಮಾಡಲಾಯಿತು. ಈ ವರ್ಷದ ಉಳಿಕೆ ಮೊತ್ತ 9.35 ಕೋಟಿ ರೂಪಾಯಿಗಳು. ಗೋನಾಳ್ ಗ್ರಾಮದ ಹತ್ತಿರ 101.8 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ವಸತಿ ಯೋಜನೆಗೆ 65 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ 2020-21 ಸಾಲಿನ ಬಜೆಟ್ ಮಂಡನೆ - ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಬಜೆಟ್
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ 2020-21ನೇ ಸಾಲಿನ 134.72 ಕೋಟಿ ರೂಪಾಯಿ ಮೊತ್ತದ ಬಜೆಟ್ ಅನ್ನು ಅಧ್ಯಕ್ಷ ದಮ್ಮೂರು ಶೇಖರ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಮಂಡಿಸಲಾಯಿತು.
ಬಜೆಟ್ ಮಂಡನೆ
ನಗರದಲ್ಲಿ ಕೊಳಚೆ ಪ್ರದೇಶಗಳ ನಿರ್ಮೂಲನೆಗೆ 0.77 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕೆರೆ ಅಭಿವೃದ್ಧಿಗೆ 6.28 ಕೋಟಿ ರೂಪಾಯಿ, ಇನ್ನುಳಿದ 62.67 ಕೋಟಿ ರೂಪಾಯಿ ಮೊತ್ತದ ವಿವಿಧ ಪ್ರಮುಖ ಯೋಜನೆಗಳು ಅಂದರೆ ಮಹಾ ಯೋಜನೆಯಲ್ಲಿ ಉದ್ಯಾನವನ/ ಬಯಲು ಪ್ರದೇಶಗಳನ್ನು ಭೂ ಸ್ವಾಧೀನ ಪಡಿಸಿಕೊಳ್ಳುವುದು. ವಿವಿಧ ಬಡಾವಣೆಗಳಲ್ಲಿ ಜಿಮ್ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವುದು ಹಾಗೂ ಇನ್ನಿತರ ಪ್ರಮುಖ ಯೋಜನೆಗಳಿಗೆ ಬಜೆಟ್ನಲ್ಲಿ ಅನುಮೋದನೆ ನೀಡಲಾಗಿದೆ.