ಬಳ್ಳಾರಿ:ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಇರುವ ಕೋವಿಡ್ ಸೆಂಟರ್ನಿಂದ 94 ವರ್ಷ ಮತ್ತು 86 ವರ್ಷಗಳ ಇಬ್ಬರು ಹಿರಿಯ ಜೀವಗಳು ಕೋವಿಡ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.
ಮನಸ್ಸಿದ್ದಲ್ಲಿ ಮಾರ್ಗ: ಕೋವಿಡ್-19 ಗೆದ್ದ ಹಿರಿಯ ಜೀವಗಳು - ಕೊರೊನಾದಿಂದ ಇಬ್ಬರು ಅಜ್ಜಿಯರು ಗುಣಮುಖ
ಬಳ್ಳಾರಿಯಲ್ಲಿ 94 ಮತ್ತು 86 ವರ್ಷ ವಯಸ್ಸಿನ ಅಜ್ಜಿಯರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೋವಿಡ್-19 ಗೆದ್ದ ಹಿರಿಯ ಜೀವಗಳು
ಕೊರೊನಾ ಸೋಂಕು ತಗುಲಿದರೆ ಭಯ ಪಡುವ ಅಗತ್ಯವಿಲ್ಲ. ಬದಲಿಗೆ ಧನಾತ್ಮಕ ಆಲೋಚನೆ ಮಾಡಿ ಚಿಕಿತ್ಸೆ ಪಡೆದುಕೊಂಡು ಹೊರ ಬಂದವರು ಸಾಕಷ್ಟು ಜನರಿದ್ದಾರೆ ಎಂಬುದನ್ನು ಈ ಇಬ್ಬರು ಅಜ್ಜಿಯರು ಸಾಬೀತುಪಡಿಸಿದ್ದಾರೆ.