ಕರ್ನಾಟಕ

karnataka

ETV Bharat / state

ಆಟೋಗಳ ಮಾಹಿತಿ ಸ್ಪಷ್ಟವಾಗಿದ್ದರೆ ಮಾತ್ರ ಬಿಟಿಪಿ ನಂಬರ್​: ಬಳ್ಳಾರಿ ಟ್ರಾಫಿಕ್​ ಪೊಲೀಸ್​ - bellary police

ಆಟೋಗಳ ದಾಖಲಾತಿಗಳು ಸ್ಪಷ್ಟವಾಗಿದ್ದರೆ ಅಂತವರಿಗೆ ಪೊಲೀಸ್​ ಇಲಾಖೆಯಿಂದ ಬಿಟಿಪಿ (ಬಳ್ಳಾರಿ ಟ್ರಾಫಿಕ್ ಪೊಲೀಸ್) ನಂಬರ್​ಗಳನ್ನು ನೀಡಲಾಗುತ್ತದೆ ಎಂದು ಸಂಚಾರಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

Bellary traffic police
ಬಳ್ಳಾರಿ ಟ್ರಾಫಿಕ್​ ಪೊಲೀಸ್​

By

Published : Feb 18, 2021, 7:55 AM IST

ಬಳ್ಳಾರಿ:ಕಳೆದ 20 ವರ್ಷಗಳ ಹಿಂದೆ ಆಟೋ ಚಾಲಕರಿಗೆ ಬಿಟಿಪಿ ನಂಬರ್​ಗಳನ್ನು ವಿತರಣೆ ಮಾಡಿದ್ದರು. ಅದೇ ರೀತಿಯಾಗಿ ಅಗತ್ಯ ದಾಖಲೆಗಳು ಇದ್ದ 100 ಆಟೋ ಚಾಲಕರಿಗೆ ಬಿಟಿಪಿ ನಂಬರ್ ವಿತರಿಸಲಾಗಿದೆ ಎಂದು ಸಂಚಾರಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿಯ ಸೆಂಟೆನರಿ ಸಭಾಂಗಣದಲ್ಲಿ ನಡೆದ ಬಳ್ಳಾರಿ ಸಂಚಾರಿ ಪೊಲೀಸ್ ಮತ್ತು ಸನ್ಮಾಗ ಗೆಳೆಯರ ಬಳಗ ನೇತೃತ್ವದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಡಕ್ ಸುರಕ್ಷಾ, ಜೀವನ್ ರಕ್ಷಾ, 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2021ರಲ್ಲಿ ಹೆಚ್ಚುವರಿ ಜಿಲ್ಲಾ ವರಿಷ್ಟಾಧಿಕಾರಿ ಬಿ.ಎನ್ ಲಾವಣ್ಯ ಅವರು ಬಿಟಿಪಿ ನಂಬರ್​ಗಳನ್ನು ಆಟೋಗಳಿಗೆ ಹಂಚುವ ಮೂಲಕ ಚಾಲನೆ ನೀಡಿದರು.

ಆಟೋಗಳ ದಾಖಲಾತಿಗಳು ಸ್ಪಷ್ಟವಾಗಿದ್ದರೆ ಅಂತವರಿಗೆ ಪೊಲೀಸ್​ ಇಲಾಖೆಯಿಂದ ಬಿಟಿಪಿ (ಬಳ್ಳಾರಿ ಟ್ರಾಫಿಕ್ ಪೊಲೀಸ್) ನಂಬರ್​ಗಳನ್ನು ನೀಡಲಾಗಿದೆ. ಅಗತ್ಯ ದಾಖಲೆಗಳು ಇಲ್ಲದವರಿಗೆ ಈ ನಂಬರ್ ನೀಡುವುದಿಲ್ಲ ಎಂದು ಆಟೋಗಳನ್ನು ಸೀಜ್ ಮಾಡಲಾಗುತ್ತದೆ ಎನ್ನುವ ಮಾಹಿತಿ ಜಿಲ್ಲಾ ವರಿಷ್ಟಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ‌‌.

ಈ ವೇಳೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ತಾಯಣ್ಣ ಮಾತನಾಡಿ, ಪೊಲೀಸ್​ ಇಲಾಖೆ ಅಧಿಕಾರಿಗಳು ನಡೆಸುವ ಸಭೆಗಳಿಗೆ ಕೆಲ ಆಟೋ ಚಾಲಕರ ಸಂಘದ ಅಧ್ಯಕ್ಷರು ಹಾಜರಾಗಿಲ್ಲ. ಅಗತ್ಯ ದಾಖಲೆಗಳು ಇಲ್ಲದವರಿಗೆ ಬಿಟಿಪಿ ನಂಬರ್ ನೀಡುವುದಿಲ್ಲ ಅಂತ ಆಟೋಗಳನ್ನು ಸೀಜ್ ಮಾಡಲಾಗುತ್ತದೆ ಎನ್ನುವ ಮಾಹಿತಿ ಜಿಲ್ಲಾ ವರಿಷ್ಟಾಧಿಕಾರಿ ಸೈದುಲು ಅಡಾವತ್​ ತಿಳಿಸಿದ್ದಾರೆ‌‌. ಇದರಿಂದ ಆಟೋ ಚಾಲಕರಲ್ಲಿ ಗೊಂದಲ ಸೃಷ್ಟಿಯಾಗಿದೆ.‌ ನಮ್ಮಲ್ಲಿ ಬಡ ಆಟೋ ಚಾಲಕರು ಸಹ ಇದ್ದಾರೆ. ‌ಬಿಟಿಪಿ ನಂಬರ್ ಆಟೋಗೆ ಹಾಕುವ ಬಗ್ಗೆ ಎಸ್​ಪಿ ಅವರೊಂದಿಗೆ ಮಾತನಾಡುತ್ತೇವೆ ಎಂದು ಹೇಳಿದರು.

ಬಳಿಕ ಆಟೋ ಚಾಲಕರ ಸಂಘದ ಅಧ್ಯಕ್ಷರು ಮತ್ತು ಹೆಚ್ಚುವರಿ ವರಿಷ್ಟಾಧಿಕಾರಿ ಬಿ.ಎನ್ ಲಾವಣ್ಯ ಅವರೊಂದಿಗೆ ಚರ್ಚೆ ನಡೆಯಿತು. ಆಟೋ ಚಾಲಕರಿಗೆ ಪೊಲೀಸರಿಂದ ಯಾವುದೇ ರೀತಿಯ ಕಿರುಕುಳ ಇಲ್ಲ. ತಪ್ಪು ಮಾಡಿದಾಗ ಪೊಲೀಸರು ದಂಡ ಹಾಕುತ್ತಾರೆ ಎಂದರು.

ಏನಿದು ಬಳ್ಳಾರಿ ಟ್ರಾಫಿಕ್ ಪೊಲೀಸ್ ನಂಬರ್:ಪ್ರತಿಯೊಂದು ಆಟೋಗಳಿಗೆ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಬಳ್ಳಾರಿ ಟ್ರಾಫಿಕ್ ಪೊಲೀಸ್ ನಂಬರ್ ನೀಡಲಾಗುತ್ತದೆ. ಅದನ್ನು ಕಡ್ಡಾಯವಾಗಿ ಆಟೋಗೆ ಅಂಟಿಸಿರಬೇಕು.‌ ಇದರಿಂದ ಆಟೋದಲ್ಲಿ ಪ್ರಯಾಣ ಮಾಡುವವರಿಗೆ ಏನಾದರು ಸಮಸ್ಯೆ ಉಂಟಾದರೇ ಪೊಲೀಸರಿಗೆ ಈ ಬಿಟಿಪಿ ನಂಬರ್ ಹೇಳಿದರೇ ಅವರ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಹಾಗೆಯೇ ಹೆಚ್ಚು ಹಣ ಕೇಳಿದ್ರೇ, ಅಗತ್ಯ ವಸ್ತುಗಳನ್ನು ಆಟೋದಲ್ಲಿಯೇ ಮರೆತು ಹೋದರೆ ಅದನ್ನು ಮರಳಿ ಪಡೆಯಲು ಅನುಕೂಲವಾಗಲಿದೆ. ಕಾನೂನಾತ್ಮಕವಾಗಿ ಆಟೋ ಚಾಲನೆಗೆ ಅವಕಾಶ ಇದೆ. ಅಗತ್ಯ ದಾಖಲೆಗಳು ಇಲ್ಲದಿದ್ದರೇ ಅಂತವರಿಗೆ ಈ ಬಿಟಿಪಿ ನಂಬರ್ ನೀಡುವುದಿಲ್ಲ.

ABOUT THE AUTHOR

...view details