ಬಳ್ಳಾರಿ:ಸ್ನೇಹ ಎನ್ನುವುದು ನಂಬಿಕೆಯ ಬಂಧನ, ಚಿಣ್ಣರಿಂದ ಹಿಡಿದು ದೊಡ್ಡವರವರೆಗೂ ಬೆಸೆಯುವ ಜಾಲ. ಪರಸ್ಪರ ನಂಬಿಕೆ, ವಿಶ್ವಾಸದ ಸಂಕೇತವಾದ ಸ್ನೇಹಿತರ ದಿನವನ್ನು ಗಡಿನಾಡ ಚಿಣ್ಣರು ಸಂಭ್ರಮದಿಂದ ಆಚರಿಸಿದರು.
ಕಲರ್ಫುಲ್ ಬ್ಯಾಂಡ್ ಕಟ್ಟಿಕೊಂಡು ಫ್ರೆಂಡ್ ಶಿಪ್ ಡೇ ಆಚರಿಸಿದ ಚಿಣ್ಣರು - Friendship day
ಗಡಿನಾಡಿನ ಚಿಣ್ಣರು ತಮ್ಮ- ತಮ್ಮ ಸ್ನೇಹಿತರಿಗೆ ಕಲರ್ಫುಲ್ ಆದ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಸ್ನೇಹದ ದಿನ ಆಚರಿಸಿ ಗುರುಗಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.
![ಕಲರ್ಫುಲ್ ಬ್ಯಾಂಡ್ ಕಟ್ಟಿಕೊಂಡು ಫ್ರೆಂಡ್ ಶಿಪ್ ಡೇ ಆಚರಿಸಿದ ಚಿಣ್ಣರು](https://etvbharatimages.akamaized.net/etvbharat/prod-images/768-512-4042248-thumbnail-3x2-friendship.jpg)
ನಗರದ ಸೂರ್ಯ ಕಲಾ ಅಕಾಡೆಮಿಯಲ್ಲಿ ಭರತನಾಟ್ಯ ಕಲಿಯುವ ಚಿಣ್ಣರು ತಮ್ಮ ಸ್ನೇಹಿತರಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಸ್ನೇಹದ ದಿನವನ್ನು ಆಚರಿಸಿದರು. ಮನೆಯಲ್ಲಿ ಮಾಡಿದ್ದ ಸಿಹಿ ತಿನಸುಗಳನ್ನು ತಮ್ಮ ಸ್ನೇಹಿತರಿಗೆ ಮತ್ತು ಗುರುಗಳಿಗೆ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು.
1935ರ ವೇಳೆ ಅಮೆರಿಕಾದಲ್ಲಿ ಆರಂಭವಾದ ಫ್ರೆಂಡ್‌ಶಿಪ್ ಡೇ ಇಂದು ವಿಶ್ವ ವ್ಯಾಪಿ ಆಚರಿಸಲ್ಪಡುತ್ತಿದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಒಂದು ಅವಕಾಶ ನೀಡುವ ಈ ಡೇ ಇದೀಗ ವಾಣಿಜ್ಯ ರೂಪ ಪಡೆದುಕೊಂಡಿದೆ. ಇದಕ್ಕೆ ಸಾಥ್ ನೀಡುವಂತೆ ಫ್ರೆಂಡ್‌ಶಿಪ್ ಬ್ಯಾಂಡ್‌ಗಳು ಇಂದಿಗೂ ಸ್ನೇಹಿತರ ಕೈಗಳನ್ನು ಬಂಧಿಸುತ್ತಿವೆ. ಇದಕ್ಕೆ ನಗರ ಮತ್ತು ಗ್ರಾಮೀಣ ಪ್ರದೇಶಗಳು ಹೊರತಾಗಿಲ್ಲ.