ಕರ್ನಾಟಕ

karnataka

ETV Bharat / state

ಬಸ್​ಗಳ ಕೊರತೆ: ಫುಟ್​ಬೋರ್ಡ್​ನಲ್ಲೇ ನೇತಾಡಿಕೊಂಡು ಪ್ರಯಾಣಿಸುವ ವಿದ್ಯಾರ್ಥಿಗಳು - Department of Transport

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕು ವೆಂಕಟಾಪುರ ಗ್ರಾಮಕ್ಕೆ ಬಸ್​ಗಳ ಕೊರತೆಯಿದ್ದು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇರುವ ಬೆರಳೆಣಿಕೆಯ ಬಸ್​ಗಳಲ್ಲೇ ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುವ ಅನಿವಾರ್ಯತೆಯಿದೆ. ಆದ್ದರಿಂದ ಸಾರಿಗೆ ಇಲಾಖೆ ಇತ್ತಕಡೆ ಗಮನಹರಿಸಿ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಫುಟ್​ಬೋರ್ಡ್​ನಲ್ಲೇ ನೇತಾಡಿಕೊಂಡು ಹೋಗುವ ವಿದ್ಯಾರ್ಥಿಗಳು

By

Published : Aug 29, 2019, 7:54 PM IST

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕು ವೆಂಕಟಾಪುರ ಗ್ರಾಮಕ್ಕೆ ಬಸ್​ಗಳ ಕೊರತೆಯಿದ್ದು, ಇರುವ ಬೆರಳೆಣಿಕೆಯ ಬಸ್​ಗಳಲ್ಲಿ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದಾರೆ.

ಕಂಪ್ಲಿ ತಾಲೂಕಿನ ಬುಕ್ಕಸಾಗರ, ರಾಮಸಾಗರ, ವೆಂಕಟಾಪುರ ಸೇರಿದಂತೆ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಹೊಸಪೇಟೆ, ಕನ್ನಡ ವಿವಿಗಳಿಗೆ ತೆರಳಬೇಕಾದ ಅನಿವಾರ್ಯತೆಯಿದೆ. ಆದರೆ ಬಸ್ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದು, ಕೇವಲ ಬೆರಳೆಣಿಕೆಯಷ್ಟು ಬಸ್ ಗಳು ಇರುವುದರಿಂದ ಸಮಯಕ್ಕೆ ಸರಿಯಾಗಿ ಶಾಲಾ, ಕಾಲೇಜ್ ಗಳಿಗೆ ತೆರಳಲು ನಿತ್ಯ ಪರದಾಡುವಂತಾಗಿದೆ.

ಫುಟ್​ಬೋರ್ಡ್​ನಲ್ಲೇ ನೇತಾಡಿಕೊಂಡು ಹೋಗುವ ವಿದ್ಯಾರ್ಥಿಗಳು

ಕಂಪ್ಲಿಯಿಂದ ಹೊಸಪೇಟೆಗೆ ಸಂಚರಿಸುವ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ ಗಳು ಇಲ್ಲದಿರುವುದರಿಂದ ಜೀವದ ಹಂಗು ತೊರೆದು ಸಂಚರಿಸುವಂತಾಗಿದ್ದು, ಸಮಯಕ್ಕೆ ಸರಿಯಾಗಿ ತಲುಪಬೇಕು ಎಂಬ ಧಾವಂತದಿಂದ ಅಪಾಯಕಾರಿಯಾಗಿ ನೇತಾಡಿಕೊಂಡು ಬಸ್​ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಆದ್ದರಿಮದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಬೇಕಾಗಿ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ABOUT THE AUTHOR

...view details